ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲ ನಲ್ಮೆಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು ಹಾಗೂ ಇಂದಿನ ದಿನದ ಈ ಒಂದು ಚಿಂತನೆ ನಮ್ಮೆಲ್ಲರಿಗಾಗಿ👍🏼🙏🏼😊 🙏🏼🙏🏼ಕುಟುಂಬಕ್ಕೆ ಕೊಡಬೇಕಾದ ಪ್ರೀತಿ🙏🏼🙏🏼 ಆ ಊರಿನಲ್ಲಿ ಒಂದು ಸರ್ಕಾರಿ ಶಾಲೆ ಇತ್ತು. ಅಲ್ಲಿದ್ದ ಒಬ್ಬ ಶಿಕ್ಷಕಿ ಬಹಳ ಶ್ರದ್ಧೆಯಿಂದ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದರು. ಪ್ರತಿಯೊಂದು ಮಕ್ಕಳ ಮನಸ್ಸು ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಅವರ ಸಮಸ್ಯೆಗಳಿದ್ದರೆ, ನಿಧಾನವಾಗಿ ಬಿಡಿಸಿ ಕೇಳಿ ಸಮಾಧಾನ ಪಡಿಸಿ ಅವುಗಳ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದರು. ಪ್ರತಿ ತಿಂಗಳು ಆಯಾ ಮಕ್ಕಳ ಪೋಷಕರನ್ನು ಶಾಲೆಗೆ ಕರೆಸಿ ಸಭೆ ನಡೆಸಿ ಮಕ್ಕಳ ಓದು, ಆಟೋಟಗಳು, ಅಂಕಗಳು, ಹವ್ಯಾಸಗಳ ಕುರಿತು ಪೋಷಕರ ಜೊತೆ ಚರ್ಚೆ ನಡೆಸುತ್ತಿದ್ದರು. ಸಭೆ ನಿಗದಿಪಡಿಸಿದ ದಿನ ಸಾಧಾರಣವಾಗಿ ಎಲ್ಲಾ ಮಕ್ಕಳ ಪೋಷಕರು ಬರುತ್ತಿದ್ದರು. ಆದರೆ ಒಂದು ಮಗುವಿನ ತಂದೆ ಮಾತ್ರ ಎಂದೂ ಸಭೆಗೆ ಬಂದಿರಲಿಲ್ಲ. ಇದನ್ನು ಗಮನಿಸಿದ ಶಿಕ್ಷಕಿ, ಸಭೆಗೆ, ಮಗುವಿನ ತಂದೆ ಬರಲೇಬೇಕೆಂದು ಕಡ್ಡಾಯ ಮಾಡಿದರು. ಆದರೆ ಆ ಮಗುವಿನ ತಂದೆ ಸಮಯವಿಲ್ಲವೆಂದು ಹೇಳಿದರು. ಪಟ್ಟು ಬಿಡದ ಶಿಕ್ಷಕಿ ನಿಮ್ಮ ಸಮಯಕ್ಕೆ ನಾನು ಸಭೆ ಸೇರಿಸುತ್ತೇನೆ ಎಂದರು. ಆಗ ಮಗುವಿನ ತಂದೆ ಒಲ್ಲದ ಮನಸ್ಸಿನಿಂದ ಒಪ್ಪಿ ಸಭೆಗೆ ಬಂದರು. ಸಭೆಗೆ ಬಂದಾಗಲೂ ಆತನು, ಶಿಕ್ಷಕಿಗೆ...