ಕೃಷ್ಣ ಮತ್ತು ದೇವಕಿ

 ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲಾ ಆತ್ಮೀಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು ಹಾಗೂ ಈ ಶುಭದಿನದ ಈ ಒಂದು ಚಿಂತನೆ ನಮ್ಮೆಲ್ಲರಿಗಾಗಿ 👍🏼😊🙏🏼



🙏🏼🙏🏼ಪೂರ್ವ ಜನ್ಮದ ಫಲ🙏🏼🙏🏼


ಶ್ರೀ ಕೃಷ್ಣ ಕಂಸನನ್ನು ಕೊಂದ ನಂತರ ತನ್ನ ಮಾತಾ ಪಿತೃಗಳಾದ

ವಾಸುದೇವ ಮತ್ತು ದೇವಕಿಯನ್ನು ಬಿಡುಗಡೆ ಮಾಡಲು ಅಲ್ಲಿನ ಸೆರೆಮನೆಗೆ ಹೋದ.

 

ತಾಯಿ ದೇವಕಿ ಉತ್ಸಾಹದಿಂದ ಕೇಳಿದಳು...

ಮಗು... ನೀನೇ ದೇವರು ಮತ್ತು ನಿನಗೆ ದೈವಿಕ ಶಕ್ತಿಗಳಿವೆ

ಹಾಗಾದರೆ ಕಂಸನನ್ನು ಕೊಂದು ನಮ್ಮನ್ನು ಬಿಡುಗಡೆ ಮಾಡಲು ನೀನು ಹದಿನಾಲ್ಕು ವರ್ಷ ಏಕೆ ಕಾಯುತ್ತಿದ್ದೆ ?


 ಶ್ರೀಕೃಷ್ಣ ಉತ್ತರಿಸಿದ.. 

ದೇವಸ್ವರೂಪಿ ತಾಯಿಯೆ ನನ್ನನ್ನು ಕ್ಷಮಿಸಿ.

ಆದರೆ ಕಳೆದ ಜನ್ಮದಲ್ಲಿ ಹದಿನಾಲ್ಕು ವರ್ಷಗಳ ಕಾಲ ನೀನು ನನ್ನನ್ನು ಕಾಡಿಗೆ ಏಕೆ ಕಳುಹಿಸಿದೆ?


ದೇವಕಿಯು ಆಶ್ಚರ್ಯಚಕಿತಳಾಗಿ ಕೃಷ್ಣ, ಇದು ಹೇಗೆ ಸಾಧ್ಯ?

 ನೀನು ಯಾಕೆ ಹೀಗೆ ಹೇಳುತ್ತಿದ್ದೀ..? 


ಕೃಷ್ಣನು ಉತ್ತರಿಸಿದ...ಅಮ್ಮಾ ನಿಮ್ಮ ಹಿಂದಿನ ಜನ್ಮದ ಬಗ್ಗೆ ನಿಮಗೆ ಏನೂ ನೆನಪಿಲ್ಲ.

ಆದರೆ ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಕೈಕೇಯಿಯಾಗಿದ್ದೀರಿ ಮತ್ತು ನಿಮ್ಮ ಪತಿ ದಶರಥನಾಗಿದ್ದ.


ದೇವಕಿಯು ಆಶ್ಚರ್ಯಚಕಿತಳಾದಳು ಮತ್ತು ಕುತೂಹಲದಿಂದ ಕೇಳಿದಳು

ಹಾಗಾದರೆ‌ ಈಗ ಕೌಸಲ್ಯ ಯಾರು? 


ಶ್ರೀ ಕೃಷ್ಣ ನಗುತ್ತ ಉತ್ತರಿಸಿದ...

ತಾಯಿ ಯಶೋದಾ.


ಹದಿನಾಲ್ಕು ವರ್ಷಗಳ ತಾಯಿಯ ಪ್ರೀತಿಯು ಅವಳ ಹಿಂದಿನ ಜನ್ಮದಲ್ಲಿ ನಿನ್ನಿಂದಾಗಿ ವಂಚಿತವಾಯಿತು. ಅದನ್ನು

ಅವಳು ಈ ಜೀವನದಲ್ಲಿ ಪಡೆದುಕೊಂಡಿದ್ದಾಳೆ.


ನೆನಪಿಡಿ.


ಪ್ರತಿಯೊಬ್ಬರೂ ತಮ್ಮ ಕರ್ಮದ ಫಲವನ್ನು ಅನುಭವಿಸಬೇಕು

ದೇವತೆಗಳು ಕೂಡ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.


ಇನ್ನು ನಾವು & ನೀವು ಯಾವ ಕರ್ಮವನ್ನು ಸಂಪಾದಿಸಬೇಕು ಎಂಬುದರ ಮೇಲೆ ಕಣ್ಣಿಡೋಣ ಏನಂತೀರಿ ಸ್ನೇಹಿತರೆ.?


ಕೃಪೆ ವಾಟ್ಸಪ್

ಸಂಗ್ರಹ ಶ್ರೀಮತಿ ಶಾರದಾ ನಾಗೇಶ್

 ಶಿಕ್ಷಕರು ಹಾಗೂ ಗಾಯಕರು ಚನ್ನಪಟ್ಟಣ

Comments