Pyaralampics2020
ಪ್ಯಾರಾಲಿಂಪಿಕ್ಸ್ ಅನ್ನೋದು ವಿಶೇಷ ಚೇತನರ ಕ್ರೀಡಾಕೂಟವಷ್ಟೇ ಅಲ್ಲದೇ ಅದೊಂದು ಮಾನವತೆ ಮತ್ತು ಜೀವನೋತ್ಸಾಹದ ಅದ್ಭುತ ಸೆಲೆಬ್ರೇಶನ್ . ತಮ್ಮ ದೈಹಿಕ ನ್ಯೂನತೆಗಳಿಗೆ ಕೊರಗುತ್ತಾ ಕೂರದೇ ವಿಶ್ವ ಮಟ್ಟದಲ್ಲಿ ದೇಶವೇ ಹೆಮ್ಮೆ ಪಡುವಂತೆ ಸಾಧನೆಗೈದಿರುವ ಮಹಾನ್ ಚೇತನಗಳಿಗೆ ಹೃತ್ಪೂರ್ವಕ ನಮನಗಳು.
❤️❤️🙏🙏
2 ಚಿನ್ನ 4 ಬೆಳ್ಳಿ 1 ಕಂಚಿನೊಂದಿಗೆ ಏಳು ಪದಕಗಳನ್ನು ಗಳಿಸಿ ನಮ್ಮ ಪ್ಯಾರಾ ಅಥ್ಲೀಟ್ ಗಳು ಈಗಾಗಲೇ ಅಪೂರ್ವ ಸಾಧನೆ ಮಾಡಿದ್ದಾರೆ.
ಕಾರ್ ಅಪಘಾತದಲ್ಲಿ 11 ವಯಸ್ಸಿಗೆ ಅಂಗವಿಕಲಗೊಂಡ 20 ತರುಣಿ ಅವನಿ ಲಖೇರ ಶೂಟಿಂಗ್ನಲ್ಲಿ ಚಿನ್ನ ಗೆದ್ದರು.
ಬೈಕ್ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದ ಸುಮಿತ್ ಅಂಟಿಲ್ ಜ್ಯಾವೆಲಿನ್ ತ್ರೋ ಅಲ್ಲಿ ಇಂದಿನ ಸ್ಪರ್ಧೆಯಲ್ಲೇ ಸತತ ಮೂರು ಬಾರಿ ವಿಶ್ವ ದಾಖಲೆ ಬರೆದು ಚಿನ್ನ ಗೆದ್ದಿದ್ದಾರೆ.
ನಲ್ವತ್ತು ವರ್ಷದ ದೇವೇಂದ್ರ ಝಝಾರಿಯಾ ಜ್ಯಾವೆಲಿನ್ ಥ್ರೋ ಅಲ್ಲಿ ಬೆಳ್ಳಿ ಗೆದ್ದಿದ್ದಾರೆ. ಇವರು 2004 ಮತ್ತು 2016 ರ ಪ್ಯಾರಾಲಿಂಪಿಕ್ಸ್ ಅಲ್ಲಿ ಚಿನ್ನ ಗೆದ್ದಿದ್ದರು ಈ ಮೂಲಕ ವೈಯಕ್ತಿಕವಾಗಿ ಅತ್ಯಂತ ಹೆಚ್ಚು ಒಲಿಂಪಿಕ್ಸ್ ಪದಕ ಗಳಿಸಿದ ಭಾರತೀಯ ಎಂಬ ಹಿರಿಮೆಗೆ ಭಾಜನರಾದರು.
ನರದೌರ್ಬಲ್ಯವಿದ್ದ ಯೋಗೇಶ್ ಕಥೂನಿಯಾ ಡಿಸ್ಕಸ್ ಥ್ರೋ ಅಲ್ಲಿ ಬೆಳ್ಳಿ ಗೆದ್ದರು
2016 ರ ಒಲಿಂಪಿಕ್ಸ್ ನಲ್ಲಿ ಕೇವಲ ಒಂದು ನಿಮಿಷ ತಡವಾಗಿ ತಲುಪಿ ಸ್ಪರ್ಧೆಯಿಂದ ಅನರ್ಹಗೊಂಡು ಅದೇ ಹತಾಶೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದ, ಎಡಗೈಯ ಅಂಗೈಯೇ ಇಲ್ಲದ ಸುಂದರ್ ಸಿಂಗ್ ಗುಜ್ರಾರ್ ಡಿಸ್ಕಸ್ ಥ್ರೋ ವಿಭಾಗದಲ್ಲಿ ಕಂಚಿಗೆ ಮುತ್ತಿಟ್ಟರು.
ಸೊಂಟದಿಂದ ಕೆಳ ಭಾಗ ಸ್ವಾಧೀನವೇ ಇಲ್ಲದ
ಭವಿನಾ ಪಟೇಲ್ ವ್ಹೀಲ್ ಚೇರ್ ಅಲ್ಲಿ ಕುಳಿತು ಟೇಬಲ್ ಟೆನ್ನಿಸ್ ಬೆಳ್ಳಿ ಜಯಿಸಿದರು.
ಅಪಘಾತದಲ್ಲಿ ಬಲಕೈ ಕಳೆದುಕೊಂಡ ನಿಷಾದ್ ಕುಮಾರ್ ಹೈ ಜಂಪ್ ಅಲ್ಲಿ ಬೆಳ್ಳಿ ಪದಕ ಪಡೆದರು.
ಎಲ್ಲ ಸರಿಯಿದ್ದೂ ಏನನ್ನೋ ದೂರುತ್ತಾ ಕೂರುವವರಿಗೆ ಇದಕ್ಕಿಂತ ದೊಡ್ಡ ಸ್ಫೂರ್ತಿ, ಪಾಠ ಇನ್ನೆಲ್ಲಾದರು ಸಿಗಲು ಸಾಧ್ಯವಿದೆ..

Comments
Post a Comment