ಚಹ ಮಾರುವನ &ಸೈನಿಕರ ಕಥೆ

 ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲ ನಲ್ಮೆಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು. ಹಾಗೂ ಈ ಶುಭ ದಿನದ   ಒಂದು ಚಿಂತನೆ ನಮ್ಮೆಲ್ಲರಿಗಾಗಿ



🙏🏼🙏🏼ಗುಣವಿದ್ದರೆ ಯಾರು ಬೇಕಾದರೂ ದೇವರಾಗಬಹುದು🙏🏼🙏🏼


ಇದೊಂದು ಸೈನಿಕರ ಕಥೆ. ಹಿಮಾಲಯದ ಶಿಖರದಲ್ಲಿ ಒಂದಷ್ಟು ಸೈನಿಕರ ತಂಡ ಯಾವಾಗಲೂ ಕಾವಲಿರಬೇಕು. ಕಾವಲಿರುವುದು ಎಂದರೆ, ಒಂದು ದಿನ ಅರ್ಧ ದಿನ ಅನ್ನುವಂತಿಲ್ಲ. ಮೂರು ತಿಂಗಳು ಕೊರೆಯುವ ಚಳಿಯಲ್ಲಿ, ಕಟಕಟ ಹಲ್ಲು ಕಡಿಯುತ್ತಾ, ಮೈಮೇಲೆ ಎರಚುವ ಮಳೆಯಲ್ಲಿ ನೆನೆಯುತ್ತಾ,ಬೇಕೆನಿಸಿದರೂ ಬಿಸಿಬಿಸಿಯಾದ ಒಂದು ಟೀ ಕಾಫಿ ಇಲ್ಲದ ಸ್ಥಳದಲ್ಲಿ, ಮೂರು ತಿಂಗಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಇರಬೇಕು. ಇದೊಂದು ಪ್ರಕ್ರಿಯೆ ಇದ್ದ ಹಾಗೆ, ಒಂದು ತಂಡ ಬಂದು ಕಾಯುತ್ತಿರುವಾಗ ಮೂರು ತಿಂಗಳು ಮುಗಿದ ನಂತರ ಮತ್ತೊಂದು ತಂಡ ಬರುತ್ತದೆ. ಇದೇ ತರಹ ಮೂರು ಮೂರು ತಿಂಗಳಿಗೊಮ್ಮೆ ಒಬ್ಬ ಮೇಜರ್ ನಲ್ಲಿ ನೇತೃತ್ವ ದಲ್ಲಿ 15 ಜನರ ತಂಡ ಇಲ್ಲಿಗೆ ಬರುತ್ತದೆ. ಮೊದಲು ಕಾಯುತ್ತಿರುವ ತಂಡ ಇನ್ನೊಂದು ತಂಡ ಯಾವಾಗ ಬರುತ್ತದೆ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುತ್ತಾರೆ.

ಕುಟುಂಬದವರ ಆಗಲಿ ಅಥವಾ ಇಲ್ಲಿ ಕಾಯಲು ಬಂದವರಿಗಾಗಲಿ ಕ್ಷೇಮವಾಗಿ  ವಾಪಸ್ಸು ಹೋಗುತ್ತೇವೆ ಎಂಬ ನಂಬಿಕೆ ಇರುವುದಿಲ್ಲ. ಹಿಮಾಲಯದ ಶಿಖರದ ಮೇಲೆ ಹೋಗಿ ಮೂರು ತಿಂಗಳು ಕಾಯುವ ಕೆಲಸ ಅಂದರೆ ಸೈನಿಕರ ಶಕ್ತಿಯ ಸತ್ವಪರೀಕ್ಷೆಯೇ ಆಗಿರುತ್ತದೆ. 


ಬಹಳ ಹಿಂದೆ ನಡೆದಿದ್ದು. ಹಿಮಾಲಯದ ಶಿಖರದ ಮೇಲೆ ಹೋಗಲು, ಒಬ್ಬ ಮೇಜರ್ ನ  ನೇತೃತ್ವದಲ್ಲಿ ಹೊರಟಿತ್ತು. ಚಳಿ ಚಳಿ ಅದೆಂಥ ಚಳಿ ಅಂದರೆ  ಮೈನೆಸ್ 20, 30, 40, 60, ಈ ರೀತಿ ಇರುವಂತಹ ಚಳಿ. ಅವರೆಲ್ಲಾ ಎಷ್ಟೇ ಬೆಚ್ಚಗೆ ಗ್ಲೌಸ್,ಸ್ನೋ ಸೂಟು, ಏನೇ ಹಾಕಿಕೊಂಡಿದ್ದರೂ, ಎಲ್ಲಾದರೂ ಒಂದು ಸೂಜಿ ಮನೆ ಎಷ್ಟು ಕಂಡಿ ಬಿಟ್ಟಿದ್ದರು ಸಾಕು, ಚಳಿ ಮೈಯ್ಯೊಳಗೆ ನುಗ್ಗಿ ಫ್ರೀಸೆ ಆಗಿ ಬಿಡಬಹುದು. ಅಂತಹ ಚಳಿ. ಅದು ಮಧ್ಯರಾತ್ರಿ ಯಾಗಿದೆ. ಎಲ್ಲರಿಗೂ ಬಿಸಿಬಿಸಿ ಟೀ ಬೇಕಿತ್ತು.  ಪಾಪ  ಸೈನಿಕರಿಗೆಲ್ಲಾ ಬಿಸಿಬಿಸಿ ಟೀ ಕೊಡಿಸಿದರೆ ಚೆನ್ನಾಗಿತ್ತು ಆದರೆ ಏನು ಮಾಡುವುದು ಮಧ್ಯರಾತ್ರಿ ಈ ಸಮಯದಲ್ಲಿ ಟೀ ಅಂಗಡಿ ಮುಚ್ಚಿರುತ್ತಾರೆ. ಎಂದು ಯೋಚಿಸುತ್ತಾ ಬರುತ್ತಿರುವಾಗ ಒಬ್ಬ ಸೈನಿಕ ಸರ್ ಇಲ್ಲೊಂದು ಟಿ ಶಾಪ್ ಇದೆ  ಬಾಗಿಲು ಮುಚ್ಚಿದೆ ಆದರೆ ನಾವು ಬಾಗಿಲು ಬೀಗ ಒಡೆದು ಒಳಗೆ ಹೋಗಿ ಟೀ ಮಾಡಿಕೊಂಡು ಕುಡಿಯೋಣ ಎಂದು ಹೇಳಿದ.

ಇದನ್ನು ಕೇಳಿದ ಮೇಜರ್ "ಹಾಗೆ ಮಾಡುವುದು ತಪ್ಪು ಬಾಗಿಲು ಹಾಕಿ ಬೀಗ ಹಾಕಿದ ಅಂಗಡಿಯ ಬೀಗವನ್ನು ಒಡೆದು ಒಳಗೆ ಹೋದರೆ ನಮಗೂ ಕಳ್ಳರಿಗೂ ಏನು ವ್ಯತ್ಯಾಸ  ಇದು ತಪ್ಪು". ಎಂದು ಮನಸ್ಸಿಗೆ ಅನ್ನಿಸಿತು. ಇನ್ನೊಂದು ಕಡೆ ದೇಶ ಕಾಯುವ ಸೈನಿಕರು ಪಾಪ ಚಳಿಯಲ್ಲಿ ನಡುಗುತ್ತಿದ್ದಾರೆ ಟೀ ಗಾಗಿ ಹಾತೊರೆಯುತ್ತಿದ್ದಾರೆ.  ಹೀಗೆ ಯೋಚಿಸಿ ಆಯಿತು ಬೀಗ ಒಡೆದು ಟೀ ಮಾಡಿಕೊಂಡು ಕುಡಿಯಿರಿ ಎಂದರು. ಬೀಗ ಒಡೆದು ಒಳಗೆ ಹೋಗಿ ನೋಡಿದರೆ, ಅವರ ಅವರ ಅದ್ರುಷ್ಟ ಎಂಬಂತೆ ದಪ್ಪನೆ ಹಾಲು (ಕಂಡೆನ್ಸ್ಡ್ ಮಿಲ್ಕ್)  ತುಂಬಾ ಟೀ ಪುಡಿ ಸಕ್ಕರೆ ಸ್ಟವ್ ಎಲ್ಲ ಇತ್ತು. ಜೊತೆಗೆ ಬಾಟಲಿಗಳಲ್ಲಿ ಬಿಸ್ಕತ್ತು ಬನ್ನು ಇತ್ತು. ಎಲ್ಲರಿಗೂ ಖುಷಿಯಾಯಿತು ಟೀ ಮಾಡಿಕೊಂಡರು ಒಬ್ಬೊಬ್ಬರಿಗೆ ಎರಡೆರಡು  ಲೋಟ ಸಿಕ್ಕಿತು. ಬನ್ನು ಬಿಸ್ಕೆಟ್ ತಿಂದು, ಟಿ ಎಲ್ಲಾ ಕುಡಿದರು. ಸೈನಿಕರಿಗೆ ಎಲ್ಲ ಚಳಿ ಕಡಿಮೆಯಾಯಿತು ಹೊಟ್ಟೆಯೂ ತುಂಬಿತು. ತುಂಬಾ ಸಂತೋಷದಿಂದ ಹೊರಟರು.ಮೇಜರ್ ಅಂಗಡಿಯಲ್ಲೇ ನಿಂತರು. ಸ್ವಲ್ಪ ಹೊತ್ತು ಯೋಚಿಸಿ ಪಾಪ ಯಾರದ್ದೊ ಅಂಗಡಿ. ನಾವು ಬಂದು  ದರೋಡೆಕೋರರ ಹಾಗೆ ಬೀಗ ಒಡೆದು ಸಾಮಾನುಗಳನ್ನೆಲ್ಲಾ ಬಳಸಿಕೊಂಡರೆ ಅವರ ಹೊಟ್ಟೆಪಾಡಿನ ಗತಿಯೇನು? ಎಂದುಕೊಂಡು ಸಾವಿರ ರೂಪಾಯಿ ತೆಗೆದು, ಅಂಗಡಿಯವನ ಕಣ್ಣಿಗೆ ಕಾಣುವಂತೆ ಸಕ್ಕರೆ ಬಾಟಲಿ ಕೆಳಗೆ ಇಟ್ಟರು. (ಆಗಿನ ಕಾಲದ ಸಾವಿರ ರೂಪಾಯಿ ಎಂದರೆ ದೊಡ್ಡ ಮೊತ್ತ) 

ಬಾಗಿಲಿಗೆ ಚಿಲಕ ಹಾಕಿ ಒಂದು ಕಡ್ಡಿ ಸಿಗಿಸಿ, ಎಲ್ಲರೂ ಶಿಖರದೆತ್ತರಕ್ಕೆ ಹೊರಟರು. 


ಅದೇ ತಂಡ ಮೂರು ತಿಂಗಳು ಮುಗಿಸಿ ಮಿಲ್ಟ್ರಿ ವ್ಯಾನ್ನಲ್ಲಿ ಬಂದು ಇಳಿದರು.  ನೋಡುತ್ತಾರೆ,  ಆ ಟೀ ಅಂಗಡಿ ತೆರೆದಿತ್ತು. ಅಂಗಡಿ ಯಜಮಾನನು ಅಲ್ಲೇ ಇದ್ದ. ಎಲ್ಲರೂ ಹೋದರು. ಟೀ ಕೇಳಿದರು ಚೆನ್ನಾಗಿ ಟೀ ಮಾಡಿಕೊಟ್ಟನು. ಬಿಸ್ಕೆಟ್, ಬನ್ನು ಎಲ್ಲ ತೆಗೆದುಕೊಂಡರು. ನೋಡುತ್ತಿದ್ದಂತೆ ಅಂಗಡಿ ಯಜಮಾನ ಬಹಳ ಒಳ್ಳೆಯವನು ಅಂತ ಅನಿಸಿತು. ಮೇಜರ್ಗೆ ಇನ್ನು ಅಪರಾಧಿ ಭಾವ ಕಾಡುತ್ತಿತ್ತು.  ಅಂಗಡಿಯವನ ಹತ್ತಿರ, ಯಜಮಾನರೇ ದೇವರು ಎಷ್ಟೊಂದು ಕಠಿಣ ಮನಸ್ಸಿನವನು ಎನ್ನುತ್ತಿದ್ದಂತೆ, ಅಂಗಡಿಯಾತ ತನ್ನೆರಡು ಕಿವಿಗಳನ್ನು ಮುಚ್ಚಿಕೊಂಡು, ಹಾಗನ್ನಬೇಡಿ ಸ್ವಾಮಿ ದೇವರು ತುಂಬಾ ದೊಡ್ಡವನು ಅವನು ಇದ್ದಾನೆ ಎಂದನು. ಅದಕ್ಕೆ ಮೇಜರ್, ದೇವರು ಇದ್ದಾನೆ ಎಂದು ಆಗಿದ್ದರೆ ನೀವು ಯಾಕೆ ಇಷ್ಟು ಕಷ್ಟ ಪಡುತ್ತಿದ್ದೀರಿ? ಈ ಚಳಿಯಲ್ಲಿ ಇಷ್ಟೊಂದು ವಯಸ್ಸಾದ ಮೇಲೆ ಇನ್ನೂ ಈ ಕೆಲಸವನ್ನೇ ಮಾಡಬೇಕಲ್ಲ ದೇವರು ಇದ್ದಿದ್ದೇ ಆಗಿದ್ದರೆ ನಿಮಗೆ ಅನುಕೂಲ ಕೊಡಬಹುದಿತ್ತಲ್ಲ ಎಂದರು. 


ಅದಕ್ಕೆ ಅಂಗಡಿಯಾತ, ನಿಮಗೆ ಗೊತ್ತಿಲ್ಲ ಸಾರ್ ದೇವರು ಇದ್ದಾನೆ.  ನನ್ನ ಪಾಲಿಗಂತೂ ಯಾವುದೋ ರೂಪದಲ್ಲಿ ಬಂದು ನನ್ನನ್ನು ,ನನ್ನ ಮಗನನ್ನು, ನನ್ನ ಇಡೀ ಕುಟುಂಬವನ್ನೇ ಕಾಪಾಡಿದ್ದಾನೆ. ಆ ದೇವರಿಗೆ ನಾನು ಎಷ್ಟು ನಮಸ್ಕರಿಸಿದರು ಸಾಲದು. ಆಗ ಮೇಜರ್ ಹೇಗೆ ?ಎಂದರು. ಈಗ ಮೂರು ತಿಂಗಳ ಹಿಂದೆ ನನಗಿರುವ ಒಬ್ಬನೇ  ಮಗ ಉಗ್ರಗಾಮಿಗಳ ಕೈಗೆ ಸಿಲುಕಿಕೊಂಡು ಪಡಬಾರದ ಕಷ್ಟಪಟ್ಟು ಜೀವ ಉಳಿದರೆ ಸಾಕು ಎಂಬಂತೆ ಸಿಕ್ಕಿದ. ದೇಹಕ್ಕೆಲ್ಲ ವಿಪರೀತ  ಹೊಡೆದು ಹಿಂಸೆ ಕೊಟ್ಟಿದ್ದರು.  ಆಸ್ಪತ್ರೆಗೆ ಸೇರಿಸಿದೆ ಡಾಕ್ಟರ್ ಔಷಧಿ ಬರೆದುಕೊಟ್ಟರು. ತುಂಬಾ ಹಣ ಬೇಕು. ನನ್ನ ಬಳಿ ಒಂದು ರೂಪಾಯಿ ಇರಲಿಲ್ಲ. ಇದ್ದ ಅಲ್ಪ ಸ್ವಲ್ಪ ಹಣ ಆಗಲೇ ಖರ್ಚಾಗಿತ್ತು. ಆದರೆ ಯಾರು ಕೊಡುತ್ತಾರೆ?  ಆಸ್ಪತ್ರೆಯ ಔಷಧಿ ಖರ್ಚು ಮಾಡಲು  ಇರಲಿಲ್ಲ. ಯಾರು ಸಾಲ ಕೊಡುವುದಿಲ್ಲ.  ಇನ್ನೇನು ಮಾಡಲಿ ಎಂದುಕೊಂಡು ದೇವರೇ ನೀನೇ ಗತಿಯೆಂದು, ನನ್ನ ಬದುಕಿಗೆ ಆಧಾರವಾಗಿದ್ದ  ಈ ಟೀ ಅಂಗಡಿಯನ್ನು ಮಾರಲು ನಿರ್ಧರಿಸಿದೆ. 


ಅಂಗಡಿ ಮಾರಿ ಬಂದ ಹಣದಿಂದ ಹಾಗೂ ಕೈಯಲ್ಲಿರುವ ಸ್ವಲ್ಪ ಹಣದಿಂದ ಆಸ್ಪತ್ರೆ ಖರ್ಚನ್ನು  ಪೂರೈಸೋಣ ಎಂದುಕೊಂಡು ಅಂಗಡಿಗೆ ಬಂದೆ ,   ಬಾಗಿಲು ನೋಡಿದರೆ ಯಾರೋ ಒಳ ಬಂದಂತಿತ್ತು. ಆದರೆ ಪುಣ್ಯವಶಾತ್ ಒಳಗೆ ಹೋಗಿ ನೋಡಿದರೆ ಅಂಗಡಿ ಸಾಮಾನುಗಳೆಲ್ಲಿ ಹಾಗೆಯೇ ಇತ್ತು. ಒಂದು

ಬಾಟಲಿ ಕೆಳಗೆ ಸಾವಿರ ರೂಪಾಯಿ ನೋಡಿದೆ. ಬಹಳ ಖುಷಿಯಾಯಿತು. ನನ್ನ ಕಷ್ಟಕ್ಕೆ ಆ ಭಗವಂತನು ನನಗೆ ಸಹಾಯ ಮಾಡಲೆಂದೇ ಯಾವುದೋ ರೂಪದಲ್ಲಿ ಬಂದು ನನ್ನ ಕಣ್ಣಿಗೆ ಕಾಣುವ ಹಾಗೆ ಹಣ ಇಟ್ಟು ಹೋಗಿದ್ದ.  ಹೀಗಿರುವಾಗ ದೇವರಿಲ್ಲ ಎಂದರೆ ಹೇಗೆ ಸ್ವಾಮಿ? ನನ್ನ ಮಗನ ಜೀವವನ್ನು ಅವನು ಕಾಪಾಡಲಿಲ್ಲವೇ ?ಎಂದು ತಡೆಯಲಾರದೆ ಅವನಿಗೆ ದುಃಖ ಉಮ್ಮಳಿಸಿ ಬಂದಿತು. 


ಇದನ್ನೆಲ್ಲಾ ಕೇಳಿಸಿಕೊಂಡ ಮುಂದೆ ನಿಂತಿದ್ದ ಸೈನಿಕನೊಬ್ಬ, ಅದನ್ನು ದೇವರು ಕೊಟ್ಟಿದ್ದಲ್ಲ ನಮ್ಮ ಮೇಜರ್ ಸಾಹೇಬರು ಇಟ್ಟಿದ್ದು ಎಂದು ಹೇಳಲು ಹೊರಟಿದ್ದ. ಮೇಜರ್ ಸಾಹೇಬರು ಕಣ್ಣುಸನ್ನೆ ಮಾಡಿ ಹೇಳಬೇಡ ಎಂದರು.

ಆಮೇಲೆ ಮೇಜರ್ ಮೇಲೆದ್ದು ಅಂಗಡಿ  ಮುದುಕನನ್ನು ತಬ್ಬಿಕೊಂಡರು.

ಅಂಗಡಿಯವನಿಗೆ, ಹೌದು  ನೀವು ಹೇಳಿದ ಹಾಗೆ ದೇವರು ಖಂಡಿತ ಇದ್ದಾನೆ. ಯಾರ್ಯಾರದೋ ರೂಪದಲ್ಲಿ ಬಂದು ಅವನು ನಮ್ಮನ್ನು ಕಾಪಾಡುವನು ಎಂದು ಹೇಳಿದರು. ಆ ದಿನ ತೆಗೆದುಕೊಂಡಿದ್ದ ಟೀ ಖರ್ಚನ್ನೆಲ್ಲ ಅವನಿಗೆ ಕೊಟ್ಟು ನಮಸ್ಕರಿಸಿ ಮುಂದೆ ಹೊರಟರು. 


ಸಾಮಾನ್ಯ ರೂಪದಲ್ಲಿ ,ಸಂಸಾರಿ ವೇಷದಲ್ಲಿ , ಹೌದಲ್ವಾ ಸ್ನೇಹಿತರೆ ಒಮ್ಮೆ ನಮ್ಮ ಜೀವನದಲ್ಲಿ ಇಂತಹ ಸಂದರ್ಭ ಬಂದಿರಲೂಬಹುದು ಅಲ್ಲವೇ ಚಿಂತಿಸಿ ಸ್ನೇಹಿತರೆ 🙏🏼

" ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡೇ, 

ಮಹಿಮೆ ಕಾಂಬೋಡಿ ನಿನಗೆ ಸಂಸ್ಕಾರವಿರಬೇಕು,

ತಾಮಸಿಗೆ ವರದಲ್ಲಿ ಮಂಕುತಿಮ್ಮ. " 


'ಗುರುರಾಜ ಕರ್ಜಗಿ' ಅವರ "ಕರುಣಾಳು ಬಾ ಬೆಳಕು" ಇದರಲ್ಲಿ ಕೇಳಿದ್ದು. 


ವಂದನೆಗಳೊಂದಿಗೆ,

ಬರಹ:- ಆಶಾ ನಾಗಭೂಷಣ.

ಸಂಗ್ರಹ ಶ್ರೀಮತಿ ಶಾರದಾ ನಾಗೇಶ್

 ಶಿಕ್ಷಕರು ಹಾಗೂ ಗಾಯಕರು ಚನ್ನಪಟ್ಟಣ

Comments