ಅತಿಯಾಸೆ ಗತಿಗೇಡು
ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲ ನಲ್ಮೆಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು. ಹಾಗೂ ಇಂದಿನ ದಿನದ ಈ ಒಂದು ಚಿಂತನೆ ನಮ್ಮೆಲ್ಲರಿಗಾಗಿ👍🏼😊🙏🏼 🙏🏼🙏🏼ನಷ್ಟ ಜೀವನದಾಸೆ🙏🏼🙏🏼 ರಷ್ಯಾದ ಮಹಾನ್ ದಾರ್ಶನಿಕ ಹಾಗೂ ಲೇಖಕ ಲಿಯೊ ಟಾಲ್‌ಸ್ಟಾಯ್‌ನ ಅನೇಕ ಕಥೆಗಳು ಮನೋಜ್ಞವಾದವುಗಳು. ಅವುಗಳಲ್ಲಿ ಒಂದು ಹೀಗಿದೆ. ಒಂದು ಊರಿನಲ್ಲಿ ಜಮೀನುದಾರನಿದ್ದ. ಅವನಿಗೆ ತುಂಬು ಪರಿವಾರ. ಅರಮನೆಯಂಥ ಮನೆ. ಇವನ ಇಷ್ಟಾನಿಷ್ಟಗಳನ್ನು ಪೂರೈಸಲು ಅನೇಕ ಸೇವಕರಿದ್ದರು. ಅವನ ನೂರಾರು ಎಕರೆ ಭೂಮಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳು ಅವನನ್ನು ಪ್ರತಿವರ್ಷ ಹೆಚ್ಚು ಶ್ರೀಮಂತನನ್ನಾಗಿ ಮಾಡುತ್ತಿದ್ದವು. ಆದರೂ ಅವನಲ್ಲಿ ಏನೋ ಅತೃಪ್ತಿ, ದುಃಖ ಮನೆಮಾಡಿದ್ದವು. ಅವನಿಗೆ ತನ್ನ ಶ್ರೀಮಂತಿಕೆ ಸಾಲದೆಂಬ ಚಿಂತೆ. ತನ್ನ ಊರಿನಲ್ಲೇ ಇನ್ನೂ ಎಷ್ಟೊಂದು ಜಮೀನು ಖಾಲಿ ಇದೆ. ಅದೆಲ್ಲ ತನ್ನದಾದರೆ ಎಷ್ಟು ಚೆಂದ! ಶ್ರೀಮಂತ ಚಿಂತಿಸಿ ರಾಜನ ಬಳಿಗೆ ಹೋದ. ಆ ರಾಜ ಮತ್ತು ತಾನು ಇಬ್ಬರೂ ಒಂದೇ ಶಾಲೆಯಲ್ಲಿ ಓದಿದವರು, ಆಗ ತುಂಬ ಆತ್ಮೀಯ ಸ್ನೇಹಿತರಾಗಿದ್ದವರು. ಈಗಲೂ ಆ ಸ್ನೇಹ ಹಾಗೆಯೇ ಉಳಿದುಕೊಂಡಿತ್ತು. ಆ ಧೈರ್ಯದ ಮೇಲೆಯೇ ಶ್ರೀಮಂತ ರಾಜನ ಕಡೆಗೆ ಹೋದಾಗ ಅವನೂ ತುಂಬ ಸಲುಗೆ ತೋರಿಸಿದ. ಆ ಮಾತು, ಈ ಮಾತು ಮುಗಿದ ಮೇಲೆ ರಾಜ ಬಂದ ವಿಷಯ ಕೇಳಿದ. ಆಗ ಶ್ರೀಮಂತ ತನ್ನ ಬಯಕೆಯನ್ನು ತಿಳಿಸಿದ....