ರಾಜ್ಯ ಕಾರ್ಯಕಾರಣಿ ಸಭೆ AKNPSEA...1
*ಅಖಿಲ ಕರ್ನಾಟಕ NPS ನೌಕರರ ಸಂಘದ ವತಿಯಿಂದ NPS TO OPS ಕಾರ್ಯಾಗಾರ ಹಾಗೂ ಮೊದಲ ಕಾರ್ಯಕಾರಿ ಸಮಿತಿ ಸಭೆ*
🔥 *ರಾಜ್ಯ ಎನ್‌ಪಿಎಸ್ ನೌಕರರ ಹಕ್ಕು ಬಾಧ್ಯತೆಗಳ ಹಿತರಕ್ಷಣೆಗಾಗಿ ಹಾಗೂ ಓಪಿಎಸ್ ಮರು ಜಾರಿಗೊಳಿಸುವ ಉದ್ದೇಶಕ್ಕಾಗಿ ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘವನ್ನು ಸ್ಥಾಪಿಸಿದ್ದು, ಸಂಘದ ಮೊದಲ ಕಾರ್ಯಕಾರಿ ಸಮಿತಿ ಸಭೆಯನ್ನು ರಾಜ್ಯಾಧ್ಯಕ್ಷರಾದ ಶ್ರೀ ಸಿ ಎಸ್ ಷಡಾಕ್ಷರಿ ಕ.ರಾ.ನೌ.ಸಂಘ ಹಾಗೂ ರಾಜ್ಯಾಧ್ಯಕ್ಷರಾದ ನಾಗನಗೌಡ ಎಂ ಎ ರವರು ಜಂಟಿ ಸಹಯೋಗದಲ್ಲಿ ಇಂದು NPS to OPS ಕಾರ್ಯಾಗಾರ ಹಾಗೂ ಮೊದಲ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯಲಾಗಿತ್ತು.*
🔥 *ಕಾರ್ಯಾಗಾರವನ್ನು ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಚಂದ್ರಶೇಖರಯ್ಯ ರವರು ಉದ್ಘಾಟಿಸಿ ಓಪಿಎಸ್ ಸರ್ಕಾರಿ ನೌಕರರ ಸಂವಿಧಾನಬದ್ಧ ಹಕ್ಕು ಆಗಿದೆ. ನೌಕರರ ಹೋರಾಟದ ಭಾಗವಾಗಿ ನಿಮ್ಮೊಂದಿಗೆ ಇದ್ದೇನೆ ಎಂದು ತಿಳಿಸಿದರು*.
🔥 *ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ ಎಸ್ ಷಡಾಕ್ಷರಿರವರು ಮಾತಾಡಿ ನೌಕರರ ಪರವಾಗಿ ೨೫ಕ್ಕೂ ಹೆಚ್ಚು ಆದೇಶಗಳನ್ನು ಮಾಡಿ ನೌಕರರ ಹಿತಾಸಕ್ತಿಗಳನ್ನು ಕಾಪಾಡುವ ಕೆಲಸ ಮಾಡಿದ್ದೇವೆ. ೭ನೇ ವೇತನ ಆಯೋಗ, ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಲಾಗಿದೆ. ನಮ್ಮ ಮುಂದೆ ಉಳಿದಿರುವ ನೌಕರರ ಬಹುದೊಡ್ಡ ಬೇಡಿಕೆ NPS TO OPS ಜಾರಿ ಮಾಡುವುದು. NPS TO OPS ಜಾರಿ ಮಾಡುವ ಹೋರಾಟ ನಮ್ಮ ಮುಂದೆ ಇದ್ದು ಸರ್ಕಾರಿ ನೌಕರರ ಸಂಘ ತೆಗೆದುಕೊಳ್ಳುವ ನಿರ್ಧಾರಕ್ಕೆ ತಮ್ಮೆಲ್ಲರ ಬೆಂಬಲ ನೀಡಬೇಕು. ಪ್ರತಿ ತಾಲ್ಲೂಕು ಜಿಲ್ಲೆಗಳಲ್ಲಿ ಸಂಘಟಿತರಾಗಬೇಕು, ನೌಕರರ ಸಂಘದ ಜೊತೆಗೆ ತಾವುಗಳು ಸಂಯೋಜಿಸಿ ತಮ್ಮನ್ನು ಜೋಡಿಸಿಕೊಳ್ಳಬೇಕು. NPS ಅಧ್ಯಯನ ಸಮಿತಿಯು ನೌಕರರ ಪರವಾದ ವರದಿಯನ್ನು ಸರ್ಕಾರಕ್ಕೆ ನೀಡುವ ನೀರಿಕ್ಷೆ ಹೊಂದಿದ್ದೇವೆ. ಸಮಿತಿಯು ವರದಿ ನೀಡಿದ ನಂತರ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಜೊತೆಗೆ ನಿರಂತರ ಸಂಪರ್ಕ ಸಾಧಿಸಿ ಮಾತುಕತೆಯ ಮೂಲಕ ಓಪಿಎಸ್ ಜಾರಿಗೊಳಿಸುವ ಪ್ರಯತ್ನ ಮಾಡುತ್ತೇವೆ. ಇಲ್ಲವಾದರೆ ಖಂಡಿತವಾಗಿ ಹೋರಾಟ ಮಾಡಿ ಓಪಿಎಸ್ ಜಾರಿಗಾಗಿ ಶ್ರಮಿಸುತ್ತೇವೆ ಎಂದು ಸಭೆಗೆ ತಿಳಿಸಿದರು.*
🔥 *ಪ್ರೋ.ರಾಧಾಕೃಷ್ಣ ರವರು ಮಾತನಾಡಿ ಎನ್‌ಪಿಎಸ್ ನೌಕರರ ಭಾವನೆಗಳನ್ನು ಅರ್ಥಮಾಡಿಕೊಂಡು ನಿಮ್ಮೊಂದಿಗೆ ಬಂದಿದ್ದೇನೆ. ಸಿ ಎಸ್ ಷಡಾಕ್ಷರಿಯವರು ಒಳ್ಳೆಯ ಕೆಲಸಗಳನ್ನು ಸರ್ಕಾರಿ ನೌಕರರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಎನ್‌ಪಿಎಸ್ ರದ್ದುಗೊಳಿಸುವ ಪ್ರನಾಳಿಕೆಯ ಭರವಸೆಯನ್ನು ನೀಡುವಲ್ಲಿ ನೌಕರರ ಪರವಾಗಿ ನಾನು ಕರ್ತವ್ಯ ನಿರ್ವಹಿಸಿದ್ದೇನೆ. ಭರವಸೆ ನೀಡಿದ ಪಕ್ಷ ಅಧಿಕಾರದಲ್ಲಿದೆ, ಸರ್ಕಾರ ಈಡೇರಿಸದೇ ಹೊದರೆ ನ್ಯಾಯಾಲಯದಲ್ಲಿ ಪ್ರನಾಳಿಕೆ ಸಮಿತಿ,ಪಕ್ಷ, ಸರ್ಕಾರದ ಮೇಲೆ ದಾವೆ ಹೂಡುವ ಬಗ್ಗೆ ಅವಕಾಶಗಳು ಇದೆಯೇ ಎಂದು ಪರಿಶೀಲನೆ ನೆಡೆಸಿದ್ದೇನೆ ಎಂದು ತಿಳಿಸಿದರು.*
🔥 *ಕಾರ್ಯಾಗಾರದಲ್ಲಿ ರಮೇಶ್ ಸಂಗಾ ರವರು ಮಾತನಾಡಿ ಸುಧೀರ್ಘವಾದ ಹೋರಾಟ ಪ್ರಯತ್ನಗಳನ್ನ ಮಾಡುವುದರ ಮೂಲಕ NPS ವಿರುದ್ಧದ ಅಂತಿಮ ಹೋರಾಟದಲ್ಲಿ ನಾವು ನೀವೆಲ್ಲರೂ ಕೂಡ ಇದ್ದೇವೆ ನಮ್ಮ ನಿಮ್ಮೆಲ್ಲರ ಜೊತೆಗೆ ರಾಜ್ಯಾಧ್ಯಕ್ಷರಾದ ಶ್ರೀ ಸಿ ಎಸ್ ಷಡಾಕ್ಷರಿ ರವರು ಇದ್ದಾರೆ ಎಲ್ಲಾ ಹಂತದಲ್ಲಿ ಸಂಘಟಿತರಾಗಿ ಸಂಘಟಿತ ಪ್ರಯತ್ನ ಮಾಡೋಣ ಎಂದು ತಿಳಿಸಿದರು*
🔥 *ಸಂಘದ ಅಧ್ಯಕ್ಷರಾದ ನಾಗನಗೌಡ ಮಾತನಾಡಿ ಎನ್‌ಪಿಎಸ್ ನೌಕರರನ್ನು ಜಾಗೃತಿಗೊಳಿಸುವ ಕೆಲಸವನ್ನು ತಳಮಟ್ಟದಿಂದ ಮಾಡಿದ್ದೇವೆ ಎನ್ ಪಿ ಎಸ್ ರದ್ದತಿ ಎಂಬ ಫಲಿತಾಂಶಕ್ಕಾಗಿ ನಾವು ಎಲ್ಲಾ ವೃಂದ ಸಂಘದ ಪದಾಧಿಕಾರಿಗಳು ಎಲ್ಲರೊಂದಿಗೆ ಒಗ್ಗಟ್ಟಾಗಿದ್ದು ಸರ್ಕಾರಿ ನೌಕರರ ಸಂಘ ತೆಗೆದುಕೊಳ್ಳುವ ಎನ್‌ಪಿಎಸ್ ವಿರುದ್ಧದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.*
🔥 *ಕಾರ್ಯಾಗಾರದಲ್ಲಿ ರುದ್ರಪ್ಪನವರು, ಡಾ.ಸದಾನಂದ ನೆಲ್ಕುದ್ರಿ,ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಗಿರಿಗೌಡ ಹೆಚ್, ಬಸವರಾಜು ಎಸ್, ಮಲ್ಲಿಕಾರ್ಜುನ ಬಳ್ಳಾರಿ, ಮೋಹನ್ ಕುಮಾರ್, ಸುರೇಶ ಶೆಡಶ್ಯಾಳ, ವಿರೇಶ ಒಡೆಯನಪುರ, ರೇಣುಕಾದೇವಿ, ರಾಯಪ್ಪಗೌಡ, ಹರ್ಷ, ಚಂದ್ರಶೇಖರ್,ಶೈಲಜಾ, ರಮಾ, ರೂಪಾ, ಸುನಿಲ್ ಕುಮಾರ್, ಚಂದ್ರಶೇಖರ್ ಯಶೋಧಾ, ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರು ತಾಲೂಕ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.*
♻️♻️♻️♻️♻️♻️♻️♻️♻️♻️♻️
*KSGEA BENGALURU*
*AK NPS EA BENGALURU*





































































































Comments
Post a Comment