ಕ.ರಾ.ಸ.NPS.ನೌಕರರ ಸಂಘ ®ಬೆಂಗಳೂರು ದಾವಣಗೆರೆಯಲ್ಲಿ ನಡೆದ ಕಾರ್ಯಕಾರಣಿ ಸಭೆ 26/12/2018

ಬೆಳಗಾವಿ ಚಲೊ ಚಿಂತನ ಮಂಥನ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಸಂಘ ಬಾಪೂಜಿ MBA collage ಕಟ್ಟಡದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿ ಯಶಸ್ವಿಗೊಳಿಸುವಲ್ಲಿ ಪ್ರಮುಖಪಾತ್ರ ವಹಿಸಿತು. ಜಿಲ್ಲಾದ್ಯಕ್ಷರಾದ ಶ್ರೀ ಶಿವಕುಮಾರ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಮೋಹನ್ ರಾಷ್ಟ್ರೀಯ ಪಿಂಚಣಿ ಯೋಜನೆಯ ಲೋಪದೋಷಗಳ ಬಗ್ಗೆ ಪ್ರಬಂಧ ಮಂಡಿಸಿದರು. ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಬೆಳಗಾವಿ ಚಲೋ ಕಾರ್ಯಕ್ರಮದ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದರು. ದಾವಣಗೆರೆ NPS ಜಿಲ್ಲಾಧ್ಯಕ್ಷರಿಗೂ ಸರ್ವ ಪದಾಧಿಕಾರಿಗಳಿಗೂ ರಾಜ್ಯ ಸಂಘದ ಪರವಾಗಿ ಅನಂತಾನಂತ ವಂದನೆಗಳು... ಹಾಗೆಯೇ ಬೆಳಗಾವಿ ಚಲೋದ ವಸತಿ, ಉಪಹಾರದ ವ್ಯವಸ್ಥೆ ಮಾಡಿದ ಬೆಳಗಾವಿ ಧಾರವಾಡದ ಎಲ್ಲಾ ತಾಲೂಕಿನ ಪದಾಧಿಕಾರಿಗಳಿಗು ಹಾಗೂ ಜಿಲ್ಲಾಧ್ಯಕ್ಷರಿಗು ರಾಜ್ಯಪದಾಧಿಕಾರಿಗಳಿಗು ಧನ್ಯವಾದಗಳನ್ನು ಅರ್ಪಿಸುತ್ತೇವೆ... ಕೇಶವಪ್ರಸಾದ್, ರಾಜ್ಯ ಖಜಾಂಚಿ, ಕರಾಸ NPS ನೌಸಂ,ಬೆಂಗಳೂರು

Comments