ಭ್ರಮೆಯಲ್ಲಿ ಬದುಕುವ ಭ್ರಮಾರಾಂಭಿಗಳಿಗೆ:------- ಕೇಶವ ಪ್ರಸಾದ್ ಖಜಾಂಜಿ KSGNPSEA

ಭ್ರಮೆಯಲ್ಲಿರುವ ಭ್ರಮಾರಾಂಭಿಗಳಿಗೆ ಹಿಂದೆ ಅನುಭವಿಸುತ್ತಿದ್ದ ಸೌಲಭ್ಯಗಳು ಇನ್ನು ಮುಂದೆ ಕೂಡ ಕಟ್ಟಿಟ್ಟ ಬುತ್ತಿ ಎಂಬ ಭ್ರಮೆಯಲ್ಲಿ ಹಲವು ಸೀನಿಯರ್ ಗಳು ಓಲಾಡುತಿದ್ದಾರೆ. ಈಗಾಗಲೇ ದೇಶದ ಒಳಿತಿಗಾಗಿ ಇಂಧನ ಸಬ್ಸಡಿ ಬಿಡಿ, ಗೊಬ್ಬರ ಸಬ್ಸಿಡಿ ಬಿಡಿ ಎನ್ನುತ್ತಿರುವ ಸರ್ಕಾರ ನಾಳೆ ಪೆನ್ಷನ್ ಬಿಡಿ,,ಡಿ ಎ ಬಿಡಿ ಎನ್ನುವುದಿಲ್ಲಾ ಅಂಥ ಏನು ಗ್ಯಾರಂಟಿ? ಈಗಾಗಲೇ ಈ.ಪಿ.ಎಫ್ ಹಣದ ಮೇಲೆ ಅದರ ಕಣ್ಣು ಬಿದ್ದಿದೆ. ವಿದೇಶಿ ಬಂಡವಾಳದ ಆಸೆಯಿಂದ ದಯೆ, ದಾಕ್ಷಿಣ್ಯ ತೊರೆದು ಬಾಲ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಿರುವ ಆಡಳಿತ ಯಂತ್ರಕ್ಕೆ ನಾವು ,ನೀವು ಯಾವ ಲೆಕ್ಕ? ಈ ದೇಶದಲ್ಲಿ ಬೇಕಾದಷ್ಟು ಸಂಪನ್ಮೂಲಗಳು ಇವೆ, ದುಡ್ಡು ಕೊಟ್ಟು ಅನುಭವಿಸಿ ಎಂದು ಧನಿಕರನ್ನು ಅವರವರ ದೇಶಕ್ಕೇ ಹೋಗಿ ಕರೆಯುವ ಸರಕಾರಕ್ಕೆ ಅದರ ಮೂಗಿನ ಕೆಳಗೆ ಕೆಲಸ ಮಾಡುವ ಜನರನ್ನು ಕಂಡರೆ ಅಸಹ್ಯವೆಂದು ತೋರುತ್ತದೆ. ಸರ್ಕಾರ ಮತ್ತು ನೌಕರನ ಅಥವಾ ಕಾರ್ಮಿಕರ ಮತ್ತು ಯಜಮಾನನ ನಡುವಿನ ಅವಿನಾಭಾವದ ಸಂಬಂಧ ಹಾಗೂ ಅವುಗಳಿಂದ ಸಮಾಜದ ಮೇಲೆ ಉಂಟಾಗುವ ಧೀರ್ಘಾವಧಿ ಧನಾತ್ಮಕ ಪರಿಣಾಮಗಳಿಗಿಂತಲೂ ವಾರ್ಷಿಕ ತೆರಿಗೆ ಸಂಗ್ರಹಣೆಯೊಂದೇ ಪ್ರಗತಿಯ ಮಾನದಂಡವಾಗಿ ಬಿಡುತ್ತಿದೆ. ನಮ್ಮ ಚಿಕ್ಕ ಚಿಕ್ಕ ಬಯಕೆಗಳು, ಸಂಬಂಧಗಳನ್ನು ಬೆಸೆಯುವ ಆತ್ಮೀಯತೆಯ ಕೊಂಡಿಗಳು, ನಮ್ಮವರಿಗೆ ಆಶ್ರಯ ನೀಡಬೇಕೆಂಬ ತುಡಿತ ಇವಕ್ಕೆಲ್ಲಾ ಪೆನ್ಷನ್ ಪೂರಕವೆಂಬ ನಮ್ಮ ಕೂಗು, ದುರಾಸೆಯ ಬೇಡಿಕೆಯಂತೆ ಕಾಣುತ್ತದೆ. ಹಿಂಸೆ,ದ್ವೇಷಗಳನ್ನೇ ಮಾನದಂಡವಾಗಿಟ್ಟುಕೊಂಡು 'ದೇಶಪ್ರೇಮ'ದ ಪರಿಭಾಷೆಯ ವ್ಯಾಖ್ಯಾನದಲ್ಲಿ ಮಗ್ನವಾಗಿರುವ ಮಹಾಜನರಿಗಂತೂ ಸಂಭಂದಗಳನ್ನು ಬೆಸೆಯುವ ಪ್ರಕ್ರಿಯೆಗಳು ಅನಗತ್ಯ ಎನ್ನಿಸತೊಡಗಿದೆ. ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರೀತಿ,ಬಾಂಧವ್ಯ ಸಹಕಾರಗಳಿಗಿಂತಲೂ ಬ್ರಾಂಡೆಡ್ ವಸ್ತುಗಳೇ ಮುಖ್ಯ ಎಂದೆನಿಸಿರುವುದರಿಂದ ಈ ದೇಶದ ನಿರ್ಗತಿಕರನ್ನು ,ಬಡವರನ್ನು ಕೆಲಸಗಾರರನ್ನು ,ನೌಕರನ್ನು ಕಂಡರೆ ಆಳುವ ವರ್ಗ ಮುಖ ಸಿಂಡರಿಸಿಕೊಳ್ಳುತ್ತದೆ. ಇವರೆಲ್ಲಾ ಯಾಕಾದರೂ ಇದ್ದರೋ ?ಸರಿಯಾದ ಟ್ಯಾಕ್ಸ್ ಜಡಿದು ಪರಂಧಾಮಕ್ಕೆ ಅಟ್ಟಬೇಕು ಎನ್ನುವ ನಿಲುವು ಧನಿಕರಲ್ಲಿ ಕಂಡುಬರುತ್ತದೆ. ಯಥಾ ಪ್ರಕಾರ ದೊಡ್ಡ ದೊಡ್ಡ ಉದ್ಯಮಗಳಿಗೆ ತೆರಿಗೆ ವಿನಾಯಿತಿ ಸಿಗುತ್ತದೆ! ವಿದೇಶೀ ನೇರ ಬಂಡವಾಳದ ಕಣ್ಣು ಕೋರೈಸುವ ಪ್ರಕಾಶದಲ್ಲಿ ,ಹೊರಗುತ್ತಿಗೆಯ ಆರ್ಭಟದಲ್ಲಿ ,contract basis ಅಬ್ಬರದಲ್ಲಿ , ನೌಕರರ ಸಬ್ಸಿಡಿ, ಗಿಬ್ಸಿಡಿ , ವೇತನ, ಡಿ.ಎ , ಪೆನ್ಷನ್ ಎಲ್ಲಾ ಮಾಯ,ಕೊನೆಗೆ ನಾವೂ ಮಾಯ ... #ಕೇಶವಪ್ರಸಾದ್ ೯೬೨೦೯೧೮೫೯೧ https://www.facebook.com/groups/504768349651462/

Comments