KSG.NPS.EA ರಾಜ್ಯ ಉಪಾಧ್ಯಕ್ಷರೂ, ಸಂಗಣ್ಣನವರ ಮಾತು ಕಡ್ಡಾಯವಾಗಿ ಓದಿ

🏹🏹🏹🏹🏹🏹🏹🏹🏹ಪ್ರಕಟಣೆ🏹🏹🏹🏹🏹🏹🏹🏹🏹🏹 *ಕಡ್ಡಾಯವಾಗಿ ಓದಿ* ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ(ರಿ) ಬೆಂಗಳೂರು ಆತ್ಮೀಯ ರಾಜ್ಯದ nps ನೌಕರ ಬಾಂಧವರೇ🙏🏿ರಾಜ್ಯದಲ್ಲಿ 1/4/2006ರಿಂದ ಜಾರಿಗೆ ಬಂದಿರುವ ಈ ನೌಕರರ ಮರಣ ಶಾಸನದ ವಿರುದ್ಧ 2016ರವರೆಗೂ ಯಾವುದೇ ಸಂಘಟನೆಗಳು ಹೋರಾಟ ಮಾಡದಿದ್ದಾಗ ಸಮಾನ ಮನಸ್ಕರರು ಸೇರಿ ಇದರ ವಿರುದ್ಧ ಹೋರಾಡಲು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವನ್ನು ಸ್ಥಾಪಿಸಿಕೊಂಡು ರಾಜ್ಯದಲ್ಲಿ ಹೋರಾಟ ಮಾಡಿದ ಮೊದಲ ಸಂಘಟನೆಯಾಗಿದೆ ಇದರ ಜೊತೆ nps ಎಂದರೇನು ಎಂಬುದರ ಬಗ್ಗೆ ರಾಜ್ಯದಲ್ಲಿ ಜಾಗೃತಿ ಮೂಡಿಸುವುದರ ಸಲುವಾಗಿ 1.nps ಮಾಹಿತಿ ಕಾರ್ಯಾಗಾರಗಳು 2.nps ತಾಲ್ಲೂಕು ಮತ್ತು ಜಿಲ್ಲಾ ಘಘಟಕಗಳ ರಚನೆ 3. ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಮಾಹಿತಿ ಕಾರ್ಯಾಗಾರ ಸಮಾವೇಶಗಳು 4. ತಾಲ್ಲೂಕು /ಜಿಲ್ಲಾ ಹಾಗೂ ವಿಭಾಗೀಯ ಮಟ್ಟದ ಸಮಾವೇಶ . 👉🏿ಪತ್ರ ಚಳುವಳಿ ಹೋರಾಟ. 👉🏿ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ 👉🏿ನಾಲ್ಕು ವಿಭಾಗೀಯ ಸಮಾವೇಶಗಳು,ಜಿಲ್ಲಾ ಸಮಾವೇಶಗಳು,ತಾಲೂಕು ಸಮಾವೇಶಗಳು 👉🏿ದೆಹಲಿ ಚಲೋ ಹೋರಾಟ 👉🏿ಬೃಹತ್ ದಾಖಲೆಯ 80000 ನೌಕರರ ಜನಸಂದಣಿಯೊಂದಿಗೆ ಪ್ರೀಡಂ ಪಾರ್ಕ ಉಪವಾಸ ಸತ್ಯಾಗ್ರಹ 👉🏿ಕರಾಳ ದಿನಾಚರಣೆಯ ಹೋರಾಟ 👉🏿ಶಾಸಕರು,ಸಂಸದರಿಗೆ ಪತ್ರ ಚಳುವಳಿ 👉🏿NMOPS ರಾಷ್ಟ್ರೀಯ ಹೋರಾಟದ ವೇದಿಕೆ ರಚನೆ 👉🏿ರಾಷ್ಟ್ರೀಯ ಕಾರ್ಯಕಾರಿಣಿ ಆಯೋಜನೆ 👉🏿ರಕ್ತಕೊಟ್ಟೇವು ಪಿಂಚಣಿ ಬಿಡೆವು ಹೋರಾಟ ವಿನೂತನ ಹೋರಾಟ . 👉🏿ರಾಮಲೀಲಾ ಮೈದಾನದಲ್ಲಿ ಸಂಸತ್ ಚಲೋ ಹೋರಾಟ. ಹೀಗೆ ವಿಭಿನ್ನ ರೀತಿಯಲಗಲಿ ಇನ್ನೂ ಹತ್ತು ಹಲವು ಹೋರಾಟಗಳನ್ನು ಮಾಡಿದರೂ ಏನೂ ಆಗಲಿಲ್ಲ ಎಂಬ ಹತಾಶೆಯ ಮಾತಗಳನ್ನು ಆಡುವ ಕೆಲವು ಸ್ನೇಹಿತರಿಗೆ ನನ್ನ ಕೆಲವು ಪ್ರಶ್ನೆಗಳು 👉🏿NPS ಹೆಸರಷ್ಟೇ ಮಾತ್ರ ಗೊತ್ತಿದ್ದ ನಮಗೆ ಇಂದು NPS ವಿಷಯದ ಮೇಲೆ ತಾಸುಗಟ್ಟಲೇ ನಿರ್ಗಳವಾಗಿ ಮಾತನಾಡುವ ಜ್ಞಾನ ದೊರೆತಿರುವುದು ಯಾವ ಸಂಘಟನೆಯಿಂದ? 👉🏿PMO ಕಚೇರಿಯಿಂದ NPS ಒಪ್ಪುವ/ ರದ್ದತಿ ಮಾಡುವ ಸಂಪೂರ್ಣ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ್ದು ಎಂಬ ಅಧಿಕೃತ ಮಾಹಿತಿ ಪಡೆಯುವಲ್ಲಿ ಸಫಲತೆ. 👉🏿 ಕೇಂದ್ರ ಸರ್ಕಾರದ ಮಾದರಿಯಲ್ಲಿ NPS ನೌಕರರಿಗೂ DCRG &Family Pension ಕೊಡಲು ಮನವಿ 👉🏿ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರನಾಳಿಕೆಯಲ್ಲಿ NPS ರದ್ದುಪಡಿಸುವ ಬಗ್ಗೆ ಘೋಷಣೆ ಮಾಡಿರುವುದು ಯಾರ ಹೋರಾಟದಿಂದ? 👉🏿ದೇಶದ ಮಾಜಿ ಪ್ರಧಾನಮಂತ್ರಿಗಳೆ ಖುದ್ದಾಗಿ ಹೋರಾಟದ ವೇದಿಕೆಗೆ ಬಂದು NPS ರದ್ದುಗೊಳಿಸಲು ಶ್ರಮಿಸುವುದಾಗಿ ಹೇಳಿಕೆಯ ಹಿಂದಿನ ಶ್ರಮ. 👉🏿ಅಧಿವೇಶನದಲ್ಲಿ NPS ರದ್ದತಿಗಾಗಿ ಆಗ್ರಹಿಸಿ ತುರುಸಿನ ಚರ್ಚೆ ನಡೆಸಲು ಶಾಸಕರಿಗೆ ಮನವರಿಕೆ . 👉🏿ಹೋರಾಟದ ವೇದಿಕೆಗೆ ಸ್ವತಃ ಒಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಹಾಜರಾಗಿ ನ್ಯಾಯಯುತವಾದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಹಾಗೂ ಮರುದಿನವೇ NPS ರದ್ದತಿಗೆ ಆದೇಶಿಸಿ ಆದೇಶದ ಪ್ರತಿಯನ್ನು ಘನ ಕೇಂದ್ರ ಸರ್ಕಾರಕ್ಕೆ ಕಳುಹಿಸುವಲ್ಲಿ ಯಶಸ್ವಿ. 👉🏿ಮಾನ್ಯ PMO ಕಚೇರಿಯಿಂದ NPS ರದ್ದತಿ ಬಗ್ಗೆ ಚರ್ಚಿಸಲು ಸಭೆ ಏರ್ಪಡಿಸಿ NMOPS ಮುಖ್ಯಸ್ಥರಿಂದ ಅಭಿಪ್ರಾಯ ಮಂಡನೆ. ಹೀಗೆ ಹಂತ ಹಂತಹಂತವಾಗಿ ಹೋರಾಟ ಮಾಡುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ಹೋರಾಟವನ್ನು ಒಂದು ತಾರ್ಕಿಕ ಅಂತ್ಯಕ್ಕೆ ತಂದು ನಿಲ್ಲಿಸಿದೆ ಈ ಸಂದರ್ಭದಲ್ಲಿ ಹೋರಾಟದ ಕ್ರೆಡಿಟ್ ಅನ್ನು ಹೈಜಾಕ್ ಮಾಡಿಕೊಳ್ಳಲು ಬೇರೆ ಸಂಘಟನೆಗಳು ಹವಣಿಸುತ್ತಿವೆ ಇದರ ಭಾಗವಾಗಿ ಕೆಲವರು ಕಾರ್ಯಪ್ರವೃತ್ತರಾಗಿದ್ದು ಈ ಬಗ್ಗೆ ಯಾರು ಗೊಂದಲಕ್ಕೆ ಒಳಗಾಗದೆ ಏಕೈಕ ಅಜೆಂಡಾದೊಂದಿಗೆ ಹೋರಾಡುತ್ತಿರುವಾಗ ನಮ್ಮ ಸಂಘದಿಂದಾಗುವ ಯಶಸ್ಸನ್ನು ತಮ್ಮ ಸಾಧನೆಯೆಂದು ಬಿಂಬಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ನಾಯಕರುಗಳ ಸಂಘವಾಗಿರದೆ ರಾಜ್ಯದ ಪ್ರತಿಯೊಬ್ಬ nps ನೌಕರರ ನಾಯಕರುಗಳ ಸಂಘವಾಗಿದೆ. ಪ್ರತಿಯೊಬ್ಬ nps ನೌಕರನ ಶ್ರಮದಿಂದ ನಾವು ಇಂದು ಹೋರಾಟ ತಾರ್ಕಿಕ ಅಂತ್ಯಕ್ಕೆ ತಂದಿದ್ದು ಇದರ ಭಾಗವಾಗಿ *ದಿನಾಂಕ - 12/12/2018 ರಂದು ಬೆಳಗಾವಿ ಸುವರ್ಣ ಸೌಧ ಚಲೋ ಹೋರಾಟ ಕಾರ್ಯಕ್ರಮ* ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸಂಘಟನೆ ಶಕ್ತಿಯನ್ನು ತೋರಿಸುವ ಮೂಲಕ ನಮ್ಮ ಹಕ್ಕಾದ ನಿಶ್ಚಿತ ಪಿಂಚಣಿ ಪಡೆಯುವ ಮೂಲಕ ನಮ್ಮ ಸಂಧ್ಯಾಕಾಲದ ಬದುಕನ್ನು ಸುಭದ್ರಗೊಳಿಸಿಕೊಳ್ಳೋಣ. "ಬನ್ನಿ ಭಾಗವಹಿಸಿ ಹೋರಾಟ ಗೆಲ್ಲಿಸಿ" ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಈ ಮೇಲಿ‌ನ ಪ್ರಶ್ನೆಗಳಿಗೆ ಉತ್ತರ *ಒಂದೇ ಒಂದು ಅದು ನಮ್ಮ ಸ್ವತಂತ್ರ ಸಂಘಟನೆಯ ಹೋರಾಟದಿಂದ* ದಯಮಾಡಿ ಈಗಲಾದರೂ ನಾವು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅರ್ಥ ಮಾಡಿಕೊಂಡು ಹೋರಾಟ ರೂಪಿಸೋಣ ಮನದ ಮೂಲೆಯಲ್ಲಿ ಚಿಕ್ಕ ಅಳುಕನ್ನು ಹೊಡೆದಟ್ಟಿ ಹೋರಾಟಕ್ಕೆ ಅಣಿಯಾಗೋಣ ಎಲ್ಲರ ಮನದಾಸೆಯಾದ OPS ಪಡಿಯೋಣ ಇಂದ ಶ್ರೀ ಸಿದ್ದಪ್ಪ ಸಂಗಣ್ಣನವರ ರಾಜ್ಯ ಹಿರಿಯ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ(ರಿ) ಬೆಂಗಳೂರು ಮೋ:-9845879102

Comments

Post a Comment