🥁🥁🥁🥁🥁🥁🥁🥁🥁🥁 *ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ®ಬೆಂಗಳೂರು*🎷🎷🎷🎷🎷🎷🎷🎷🎷🎷
*Copyrights@KSG NPS EA*
ಬೇಡಿಕೆಗಳ ಈಡೇರಿಕೆಗಾಗಿ ಜನರು ನಾನಾ ರೀತಿಯ ಚಳವಳಿ ಹಾಗೂ ಮುಷ್ಕರಗಳನ್ನು ಮಾಡಿರುವ ಬಗ್ಗೆ ಕೇಳಿರುತ್ತೀರಿ. ಈ ಚಳವಳಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವುದೇ ಹೆಚ್ಚು. ನಿರುಪದ್ರವಿ ಚಳವಳಿಗಳೂ ಇವೆ. ಆದರೆ ಜೀವದಾನ ಎಂದು ಕರೆಯಲ್ಪಡುವ ರಕ್ತದಾನದ ಮೂಲಕ ಹಲವಾರು ಜೀವಗಳ ರಕ್ಷಣೆ ಮಾಡಲು, ಆ ಚಳವಳಿಯ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸಲು ಬೃಹತ್ ಸಂಖ್ಯೆಯಲ್ಲಿ ಸರಕಾರಿ NPS ನೌಕರರು ಸಿದ್ಧರಾಗಿದ್ದಾರೆ ಎಂಬುದು ಗೊತ್ತೇ? ಹೌದು ಹೀಗೊಂದು ವಿನೂತನ ಚಳವಳಿಯ ಮೂಲಕ ಹಕ್ಕೊತ್ತಾಯಕ್ಕೆ ಮುಂದಾಗಿರುವವರು ನಮ್ಮ ರಾಜ್ಯದ ಎನ್.ಪಿ.ಎಸ್.(ಹೊಸ ಪಿಂಚಣಿ ಯೋಜನೆ)ಯ ನೌಕರರು. ಹೊಸ ಪಿಂಚಣಿ ಯೋಜನೆಯನ್ನು ಕೈಬಿಟ್ಟು ಹಳೆ ಪಿಂಚಣಿ ಯೋಜನೆ ಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಇದೇ ಅಕ್ಟೋಬರ್ 3ರಂದು ಎನ್.ಪಿ.ಎಸ್ ನೌಕರರು ರಾಜ್ಯಾದ್ಯಂತ ರಕ್ತದಾನ ಚಳುವಳಿಯನ್ನು ಯಶಸ್ವಿಗೊಳಿಸಿರುತ್ತೀರಿ.
ಅಂದು ದಿನ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಕ್ತ ಕೊಟ್ಟೇವು-ಪಿಂಚಣಿ ಬಿಡೆವು ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ರಕ್ತದಾನ ಮಾಡಲಾ ಗುತ್ತದೆ. ರಾಜ್ಯಾದ್ಯಂತ ಸುಮಾರು 2.5 ಲಕ್ಷ ಎನ್. ಪಿ. ಎಸ್. ನೌಕರರು ಈ ಚಳವಳಿಯಲ್ಲಿ ಭಾಗವಹಿಸಿ ಅದರಲ್ಲೂ ಸರಕಾರಿ ಆಸ್ಪತ್ರೆಗಳ ಬ್ಲಡ್ ಬ್ಯಾಂಕುಗಳಿಗೆ ಈ ರಕ್ತವನ್ನು ದಾನ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಎನ್. ಪಿ. ಎಸ್. ರದ್ದು ಮಾಡುವುದಾಗಿ ಭರವಸೆ ನೀಡಿದ್ದರು.
ಬೇಡಿಕೆ ಈಡೇರಿಸಿಕೊಳ್ಳುವುದು ನೌಕರರ ಮುಖ್ಯ ಉದ್ದೇಶ.
ಏಕೆ ಎನ್.ಪಿ.ಎಸ್.ಗೆ ಇಷ್ಟೊಂದು ವಿರೋಧ?
ಎನ್. ಪಿ. ಎಸ್. ಬಗ್ಗೆ ಗೊತ್ತಿಲ್ಲದವರಿಗೆ ಈ ಪ್ರಶ್ನೆ ಖಂಡಿತಾ ಮೂಡಿರಬಹುದು. ಭಾರತದಲ್ಲಿ 1912ರಿಂದಲೇ ನಿಶ್ಚಿತ ಪಿಂಚಣಿ ಯೋಜನೆ ಆರಂಭವಾಗಿತ್ತು. ಸರಕಾರಿ ಸೇವೆಯಲ್ಲಿ ಮೂವತ್ತು ವರ್ಷಸರಕಾರಿ ನೌಕರಿಯಲ್ಲಿದ್ದವರಿಗೆ ತಮ್ಮ ಇಳಿವಯಸ್ಸಿನಲ್ಲಿ ನೆರವಾಗಲು ಈ ಯೋಜನೆ ಜಾರಿಗೆ ತರಲಾಗಿತ್ತು. ವಿಶ್ವಬ್ಯಾಂಕ್ 2003ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಿಗೆ ಸಾಲ ನೀಡಲು,ತನ್ನ ನೌಕರರಿಗೆ ಎನ್. ಪಿ. ಎಸ್. ಅನುಷ್ಠಾನಗೊಳಿಸುವಂತೆ ಷರತ್ತು ವಿಧಿಸಿತ್ತು. ಈ ಷರತ್ತಿನನ್ವಯ ಕ್ರೋಢೀಕರಣಗೊಂಡ ಮೊಬಲಗನ್ನು ವಿಶ್ವ ಷೇರು ಮಾರುಕಟ್ಟೆಯಲ್ಲಿ ಹೂಡಬೇಕು, ಅದರ ಲಾಭಾಂಶದಿಂದ ಪಿಂಚಣಿ ನೀಡಬೇಕು. ಹಳೆಯ ಪಿಂಚಣಿ ಯೋಜನೆಯಲ್ಲಿ ನೌಕರನ
ಸಂಬಳದಿಂದ ಪಿಂಚಣಿ ಹೆಸರಿನಲ್ಲಿ ಯಾವುದೇ ಕಡಿತವಿರಲಿಲ್ಲ. ಆದರೆ ಹೊಸ ಪಿಂಚಣಿ ಯೋಜನೆಯಲ್ಲಿ ಮೂಲವೇತನ ಹಾಗೂತುಟ್ಟಿ ಭತ್ತೆಯ ಶೇ.10 ನ್ನು ಕಡಿತ ಮಾಡಲಾಗುತ್ತದೆ. ಜೊತೆಗೆ ಸರಕಾರ ಅಷ್ಟೇ ಮೊತ್ತವನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂದಾಯ ಮಾಡುತ್ತದೆ. ಹಳೆಯ ಪಿಂಚಣಿಯಲ್ಲಿ ಸಾಮಾನ್ಯ ಭವಿಷ್ಯ ನಿಧಿ(ಜಿ.ಪಿ.ಎಫ್) ಸೌಲಭ್ಯವಿದೆ. ಆದರೆ ಹೊಸ ಪಿಂಚಣಿದಾರರಿಗೆ ಈ ಸೌಲಭ್ಯವಿಲ್ಲ.
ಹಳೆಯ ಪಿಂಚಣಿ ಯೋಜನೆಯಲ್ಲಿ ಗರಿಷ್ಠ 33ವರ್ಷ ಸೇವೆಗೈದ ಸರ್ಕಾರಿ ನೌಕರನ ಅಂತಿಮ ವೇತನದ ಶೇ.50ರಷ್ಟು ಪಿಂಚಣಿ ಮೊಬಲಗನ್ನು ನೀಡಲಾಗುತ್ತದೆ. ಹೊಸ ಪಿಂಚಣಿಯಲ್ಲಿ ಈ ರೀತಿ ಖಚಿತ ಪಿಂಚಣಿ ಇಲ್ಲ. ಷೇರು ಮಾರುಕಟ್ಟೆ ಆಧಾರಿತ ಪಿಂಚಣಿ ಇರುತ್ತದೆ. ಹಳೆಯ ಪಿಂಚಣಿಯಲ್ಲಿ ಮೂರನೇ ಒಂದು ಭಾಗದಷ್ಟು ಪಿಂಚಣಿಯನ್ನು ಪರಿವರ್ತಿಸಿ ಆ ಮೊತ್ತವನ್ನು ನಿವೃತ್ತಿ ಸಮಯದಲ್ಲಿ ಒಟ್ಟಿಗೆ ಪಡೆಯಬಹುದು. ಆದರೆ ಹೊಸ ಪಿಂಚಣಿ (ಎನ್. ಪಿ. ಎಸ್. )ನಲ್ಲಿ ಈ ಸೌಲಭ್ಯ ಇರುವುದಿಲ್ಲ. ಕರ್ನಾಟಕ ಸರಕಾರಿ ನೌಕರರ ಕುಟುಂಬ ಪಿಂಚಣಿ ನಿಯಮಾವಳಿ 2002ರ ಪ್ರಕಾರ ಉಪಲಬ್ಧಿಗಳ ಶೇ.30ರಷ್ಟು ಮಾಸಿಕ ಕುಟುಂಬ ಪಿಂಚಣಿ ಲಭ್ಯ. ದಿನಾಂಕ 23.06.2018 ರ ಸರಕಾರಿ ಆದೇಶ ಸಂಖ್ಯೆ ಆ.ಇ. 34 ಪಿ.ಇ.ಎನ್. 2018ರ ಮೇರೆಗೆ ದಿನಾಂಕ 01.04.2018ರಿಂದ ಜಾರಿಗೆ ಬರುವಂತೆ ಎನ್. ಪಿ. ಎಸ್.ನವರಿಗೆ ಕುಟುಂಬ ಪಿಂಚಣಿ ಕಲ್ಪಿಸಿದ್ದರೂ ಇದು ಐಚ್ಛಿಕವಾಗಿರುತ್ತದೆ.
ಪ್ರಪಂಚದಾದ್ಯಂತ ಬೃಹತ್ ಆರ್ಥಿಕ ಕುಸಿತಗಳು ಆಗಾಗ ಸಂಭವಿಸುತ್ತಿರುವಾಗ, ರೂಪಾಯಿಯ ಬೆಲೆ ಕುಸಿದಾಗ, ನೌಕರರ ಷೇರು ಇರುವ ಕಂಪೆನಿಗಳು ನಷ್ಟ ಅನುಭವಿಸಿದಾಗ ಎನ್. ಪಿ. ಎಸ್. ನೌಕರರ ಸಂಬಳದಿಂದ ಪ್ರತಿ ತಿಂಗಳು ಕಡಿತಗೊಂಡ ಆ ಹತ್ತು ಶೇಕಡಾ ಮೊತ್ತ ಕೇವಲ ಅಸಲಿನಷ್ಟಾದರೂ ಹಿಂದೆ ಬಂದೀತೆಂಬ ಯಾವ ಖಾತ್ರಿಯೂ ಇಲ್ಲ. ಷೇರು ಮಾರುಕಟ್ಟೆಯಲ್ಲಿ ದಾಖಲೆ ಏರಿಕೆಯಾದರೆ ನೌಕರರಿಗೆ ಬಂಪರ್ ಲಾಭಾಂಶ ದೊರೆಯಬಹುದು. ಆದರೆ ಆ ಸಾಧ್ಯತೆ ತೀರಾ ಕ್ಷೀಣ. ಹಳೆ ಪಿಂಚಣಿಯಲ್ಲಿ ನಿವೃತ್ತಿ ಪಿಂಚಣಿಗೆ ತುಟ್ಟಿ ಭತ್ತೆ ಸೌಲಭ್ಯವಿದೆ. ಆದರೆ ಎನ್. ಪಿ. ಎಸ್. ನಲ್ಲಿ ಆ ಸೌಲಭ್ಯವಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸರಕಾರದ ಕಾನೂನು ಎನ್. ಪಿ. ಎಸ್. ನೌಕರರ ಪಾಲಿಗೆ ಮರೀಚಿಕೆಯಾಗಿದೆ. 01-04-2006ರ ನಂತರ ನೇಮಕವಾದವರು ತಮಗಿಂತ ಮೊದಲು ನೇಮಕ ವಾದವರಂತೆ ತಮ್ಮ ಪೂರ್ತಿ ಸಂಬಳವನ್ನು ಪಡೆಯಲು ಸಾಧ್ಯವಿಲ್ಲ. ಶೇ.10ರಷ್ಟು ಸಂಬಳ ಎನ್. ಪಿ. ಎಸ್.ಗೆ ಕಡಿತವಾಗಿ ಉಳಿದ ಹಣವನ್ನಷ್ಟೇ ಅವರು ಪಡೆಯಬಹುದು.
*KSG NPS EA*
ಎನ್. ಪಿ. ಎಸ್. ಎಂಬ ಹೊಸ ಪಿಂಚಣಿ ವ್ಯವಸ್ಥೆ ಹಲವು ನ್ಯೂನತೆಗಳಿಂದ ಕೂಡಿರುವುದರಿಂದಲೂ, ನಿವೃತ್ತಿ ಪಿಂಚಣಿಯ ಬಗ್ಗೆ ಖಚಿತತೆ ಹೊಂದಿಲ್ಲದಿರುವುದರಿಂದಲೂ ನೌಕರರು ಈ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ. ನಮ್ಮ ಪಿಂಚಣಿ ನಮ್ಮ ಹಕ್ಕು ಅದಕ್ಕಾಗಿ ರಕ್ತ ಕೊಟ್ಟೇವು-ಪಿಂಚಣಿ ಬಿಡೆವು ಎಂದು ತೀವ್ರ ಹೋರಾಟಕ್ಕಿಳಿದಿದ್ದಾರೆ. ಕುಟುಂಬ ಪಿಂಚಣಿ ವ್ಯವಸ್ಥೆ (Family Pension) ಹಾಗೂ DCRG ಗಾಗಿ 2018, ಜ.29 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ "ಜನವರಿ ಇಪ್ಪತ್ತು- ಎದ್ದು ಬನ್ನಿ ಆವತ್ತು' ಎಂಬ ಧ್ಯೇಯವಾಕ್ಯದಡಿ ನಡೆದ ಹೋರಾಟದಲ್ಲಿ ಎಂಭತ್ತು ಸಾವಿರ ಜನ ಸೇರಿದ್ದರು. ಇದರ ಫಲವಾಗಿ DCRG ಹಾಗೂ Family Pension ಸೌಲಭ್ಯ ಲಭ್ಯವಾಗಿದೆ. ಉದ್ದೇಶಿತ ರಕ್ತ ಕೊಟ್ಟೇವು-ಪಿಂಚಣಿ ಬಿಡೆವು ಎಂಬ ರಕ್ತದಾನ ಚಳವಳಿಯಲ್ಲಿ 22 ಸಾವಿರಕ್ಕೂ ಮಿಕ್ಕಿ NPS ನೌಕರರು ರಕ್ತದಾನ ಮಾಡಿದ್ದಾರೆ. ಇದನ್ನು ಖಚಿತಪಡಿಸಲೆಂಬಂತೆ ಬೃಹತ್ ಸಂಖ್ಯೆಯಲ್ಲಿ ರಕ್ತದಾನವನ್ನು ಎನ್. ಪಿ. ಎಸ್. ನೌಕರರು ಸಾಮಾಜಿಕ, ಭಾವನಾತ್ಮಕ ಕೆಲಸ ಮಾಡಿದ್ದಾರೆ.
*KSG NPS EA*
ಹೊಸ ಪಿಂಚಣಿ ವ್ಯವಸ್ಥೆಯ ಕುರಿತಾದ ತಮ್ಮ ಅಸಮಾಧಾನ ಹಾಗೂ ನೋವನ್ನು ಸಾವಿರಾರು ರೋಗಿಗಳಿಗೆ ಉಪಯೋಗ ವಾಗುವ ರೀತಿಯಲ್ಲಿ ಪ್ರದರ್ಶಿಸಲು ಇವರು ಮುಂದಾದದ್ದು ಅನುಕರಣೀಯವೆನಿಸಿದೆ. ತಮ್ಮ ಚಳವಳಿಗೆ ಎನ್. ಪಿ. ಎಸ್.ಗೆ ಒಳಪಡದ ನೌಕರರು ಹಾಗೂ ಸಾರ್ವಜನಿಕರು ಬೆಂಬಲ ನೀಡುವ ಭರವಸೆಯೊಂದಿಗೆ, ಹೊಸ ಪಿಂಚಣಿ ವ್ಯವಸ್ಥೆ ರದ್ದಾಗುವ ಕನಸಿನೊಂದಿಗೆ ಅಚಲ ನಿರ್ಧಾರದೊಂದಿಗೆ ನ್ನು ಎನ್. ಪಿ. ಎಸ್. ನೌಕರರು *ಡಿಸೆಂಬರ್ ತಿಂಗಳಲ್ಲಿ ಬೆಳಗಾವಿ ಅಧಿವೇಶನ ಚಲೋ* ಎದುರು ನೋಡುತ್ತಿದ್ದಾರೆ. ಎನ್. ಪಿ. ಎಸ್. ಎಂಬ ಅವೈಜ್ಞಾನಿಕ ಪದ್ಧತಿ ರ¨ದ್ದಾಗಿ ಅವರ ಬೇಡಿಕೆಗಳು ಈಡೇರಲಿ.
🔷🔷 *KSG NPS EA*🔷🔷
🌈🌈ಆತ್ಮೀಯರೇ NPS ರದ್ದತಿಗಾಗಿ🌈🌈
👇NPS ನೌಕರರ ನಿರಂತರ ಹೋರಾಟ ಕಾರ್ಯಕ್ರಮಗಳು👇 *ಕರ್ನಾಟಕ ರಾಜ್ಯದ ಸಮಸ್ತ NPS ನೌಕರ ಬಾಂಧವರೇ 🙏🙏🙏🙏🙏🙏🙏 ಮಾನವನ ಜೀವನವೇ ಒಂದು ಹೋರಾಟ. ಪ್ರಾಚೀನ ಕಾಲದಿಂದಲೂ ಹೋರಾಟದ ಮೂಲಕವೇ ಇಂದಿನವರೆಗೂ ಪ್ರಜಾಪ್ರಭುತ್ವದ ವ್ಯವಸ್ಥೆ ಸ್ಥಾಪಿಸಿಕೊಂಡು ಸಾಮಾಜಿಕ ನ್ಯಾಯಯುತ, ಸಂವಿಧಾನ ಬದ್ಧ ಆಶಯಗಳಂತೆ ತನ್ನ ಅವಶ್ಯಕತೆಗಳನ್ನು ಪಡೆಯುತ್ತಾ ಇಲ್ಲಿಯವರೆಗೆ ಸಾಗಿ ಬಂದಿದ್ದಾನೆ. ಅದೇ ರೀತಿ ನೌಕರ ವರ್ಗದವರಿಗೆ ಸೌಲಭ್ಯಗಳನ್ನುನೀಡುವುದರಲ್ಲಿ ವ್ಯವಸ್ಥೆಗಳು ತೆಗೆದುಕೊಳ್ಳುವ ತಾರತಮ್ಯದ ನಿರ್ಧಾರಗಳಿಂದ ನೌಕರ ವರ್ಗದವರ ಸ್ಥಿತಿಗಳು ಅಭದ್ರತೆಯಿಂದ ಇರುವುದು.
ಅದರಲ್ಲೂ 01-04-2006 ನಂತರ ನೇಮಕಾತಿ ಹೊಂದಿರುವ ಸರ್ಕಾರಿ,ಅನುದಾನಿತ, ಸ್ವಾಯತ್ತ ಸಂಸ್ಥೆ, ನಿಗಮ ಮಂಡಳಿಗಳ NPS ನೌಕರರ ಪಾಡು ಹೇಳತಿರದಾಗಿದೆ.ಇದು ಅತಿಶಯೋಕ್ತಿಯಲ್ಲ,ಜಾಗತಿಕರಣ,ಖಾಸಗೀಕರಣದ ಸೋಗಿನಲ್ಲಿ, ಶೇರು ಮಾರುಕಟ್ಟೆ ಆಧಾರಿತ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಾಗಿ NPS ನೌಕರರನ್ನು ಕುತ್ತಿಗೆ ಹಿಡಿದು ತಳ್ಳಲಾಗಿದೆ. ಸೇವೆಯಲ್ಲಿರುವಾಗಲೇ ಮರಣ ಹೊಂದಿರುವ ನೌಕರರ ಕುಟುಂಬಗಳ ಪರಿಸ್ಥಿತಿಗಳು ಯಾರಿಗೂ ಬರಬಾರದು ಎನ್ನುವುದು ಆ ಸೃಷ್ಟಿಕರ್ತನಲ್ಲಿ ಕೋರಿಕೆ.
🌈🌈ಆತ್ಮೀಯರೇ NPS ರದ್ದತಿಗಾಗಿ🌈🌈
👇NPS ನೌಕರರ ನಿರಂತರ ಹೋರಾಟ ಕಾರ್ಯಕ್ರಮಗಳು👇
ಹಳೆಯ ಪಿಂಚಣಿ ವ್ಯವಸ್ಥೆಯಲ್ಲಿ ಪಡೆಯುವ ಪಿಂಚಣಿ ಸೌಲಭ್ಯಗಳು - NPS ನೌಕರರಿಗೆ ಇಲ್ಲ. ಇದು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣದ ನೀತಿ. ಇಂತಹ ಅಸಂವಿಧಾನಿಕ, ಅವೈಜ್ಞಾನಿಕ ನೀತಿಯ NPS ಯೋಜನೆ,PFRD ಕಾಯ್ದೆಯ ವಿರುದ್ಧ ತೊಡೆ ತಟ್ಟಿ ನಿಂತಿದ್ದು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ಹಾಗೂ 2.50 ಲಕ್ಷ ನೌಕರರು. ಸಂಘದ ಉಗಮ ಹೊಂದಿ
🔷ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರತಿ ತಾಲ್ಲೂಕು ಗಳಲ್ಲಿ ತಹಶೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿ ಗಳಿಗೆ NPS ರದ್ದತಿಗೆ ಮನವಿ ಸಲ್ಲಿಸಲಾಗಿದೆ.
👍ಇಲ್ಲಿಂದಲೇ ಆರಂಭ ಮಾಸ್ ಹೋರಾಟ👍
🔷 200 ಕ್ಕೂ ಹೆಚ್ಚು ಸಂಘಟನಾ ಸಭೆ, ಕಾರ್ಯಗಾರಗಳು
🔷 ಪ್ರತಿ ಜಿಲ್ಲಾ, ತಾಲ್ಲೂಕು ಸಮಾವೇಶಗಳು
🔷ಬೆಂಗಳೂರು ರಾಷ್ಟ್ರೀಯ ವಿಚಾರ ಸಂಕಿರಣ,
🔷ಬೆಂಗಳೂರಿನಲ್ಲಿ NMOPS ಸ್ಥಾಪನೆಗೆ ಅಡಿಗಲ್ಲು ಹಾಕಿದ್ದು,
2 ರಾಷ್ಟ್ರೀಯ NMOPS ಕಾರ್ಯಕಾರಿ ಸಮಿತಿ ಸಭೆ,
🔷15ರಾಜ್ಯ ಕಾರ್ಯಕಾರಿ ಸಮಿತಿ ಸಭೆಗಳು- 16 ನೇಯದು ಮಂಗಳೂರು ನವೆಂಬರ್ 18 ಕ್ಕೆ
🔷4 ವಿಭಾಗೀಯ ಸಮಾವೇಶಗಳು
🔷ಎರಡು ಬಾರಿ ದೆಹಲಿ ಪಾರ್ಲಿಮೆಂಟ್ ಚಲೋ ಆಯೋಜನೆ (ಜಂತರ್ ಮಂತರ್, ರಾಮಲೀಲಾ ಮೈದಾನ)
🔷ಮತ್ತೆ 2018 ನವೆಂಬರ್ 26 ಕ್ಕೆ 2019 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದಿಲ್ಲಿ ಪಾರ್ಲಿಮೆಂಟ್ ಚಲೋ
🔷ಕರ್ನಾಟಕದ ಎಲ್ಲಾ ಗೌರವಾನ್ವಿತ MP MLA,MLC ಗಳಿಗೆ 2ರಿಂದ 4 ಬಾರಿ ಮನವಿ ಅರ್ಪಣೆ
🔷ಎಪ್ರಿಲ್ 1, ಕರಾಳ ದಿನಾಚರಣೆ
🔷ನಿಶ್ಚಿತ ಪಿಂಚಣಿ ನಮ್ಮ ಹಕ್ಕು ದಿನಾಚರಣೆ
🔷ಮಾನ್ಯ ಗೌರವಾನ್ವಿತ ಪ್ರಧಾನ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಚಳವಳಿ
🔷ಗೌರವಾನ್ವಿತ ಎಲ್ಲಾ ಪಕ್ಷ ಗಳ ರಾಜ್ಯಾಧ್ಯಕ್ಷರುಗಳಿಗೆ ಹಾಗೂ ಎಲ್ಲಾ ಪಕ್ಷಗಳ ಪ್ರನಾಳಿಕೆ ಸಮಿತಿ ಅಧ್ಯಕ್ಷರಿಗೆ NPS ರದ್ದತಿಗಾಗಿ ಮನವಿ ಸಲ್ಲಿಕೆಯಂತಹ ಕಾರ್ಯಕ್ರಮಗಳನ್ನು ಸಂಘ 2.5 ವರ್ಷಗಳಲ್ಲಿ 24X7 ರೀತಿಯಲ್ಲಿ ದಿಟ್ಟತನ ದಿಂದ ನಿರಂತರವಾಗಿ ಹೋರಾಟ ಮುಂದುವರೆಸಿದೆ.
🔷ಅಂತಹ ಹೋರಾಟಗಳಲ್ಲಿ ಬೆಂಗಳೂರು ಪ್ರೀಡಂ ಪಾರ್ಕ್ ಹೋರಾಟ ಒಂದು ನೌಕರರ ಹೋರಾಟದಲ್ಲಿ ಒಂದು ಮೈಲಿಗಲ್ಲು. *2018 ಜನೇವರಿ 20 ರಂದು (ಜನೇವರಿ ಇಪ್ಪತ್ತು ಎದ್ದು ಬನ್ನಿ ಆವತ್ತು) 80,000 ನೌಕರರು ಬೆಂಗಳೂರು ಪ್ರೀಡಂ ಪಾರ್ಕ್ ಹೋರಾಟಕ್ಕೆ ಎದ್ದು ಬಂದಿದ್ದರ ಪ್ರತಿಫಲ - NPS ನೌಕರರಿಗೆ DCRG ಮತ್ತು FAMILY PENSION ಸೌಲಭ್ಯವನ್ನು ಪಡೆದಿದ್ದೇವೆ.* 📣📣📣📣📣📣📣📣
*KSG NPS EA*
🔷*ಅಂದು ಕರ್ನಾಟಕದಲ್ಲಿ ಸ್ವಾತಂತ್ರ್ಯಕ್ಕಾಗಿ "ಏಸೂರು ಕೊಟ್ಟರೂ ಈಸೂರು ಬಿಡೇವು"ಹೋರಾಟ. ಇಂದು ಕರ್ನಾಟಕದಲ್ಲಿ ನಿಶ್ಚಿತ ಪಿಂಚಣಿ ಗಾಗಿ "ರಕ್ತ ಕೊಟ್ಟೇವು ಪಿಂಚಣಿ ಬಿಡೇವು" ಎಂಬ ಹೋರಾಟ🙏🙏ಅಕ್ಟೋಬರ್ 3. 2018 * ಯಶಸ್ವಿಯಾಗಿದೆ.ನಾಡ ದೊರೆ ಮಾನ್ಯ ಮಖ್ಯಮಂತ್ರಿಯವರಿಗೆ ಮಾಹಿತಿ ನೀಡಿ, NPS ರದ್ದತಿಗಾಗಿದಿನಾಂಕ ನಿಗದಿ ಪಡಿಸುವಂತೆ ಮನವಿ ಸಲ್ಲಿಸಾಗಿದೆ.
🔷 CM ರವರು ಸರ್ಕಾರದ ಆರ್ಥಿಕ ಇಲಾಖೆ ಕಡತ ಸಿದ್ದಪಡಸಲು ಸೂಚನೆ ನೀಡಿದ್ದಾರೆ. (ವಿಜಯವಾಣಿ ಹಾಗೂ KSG NPS EA ಲೆಟರ್ ಹೆಡ್ ನೋಡಿದ್ದೀರಿ.)
🔷 TV 1 ವಾಹಿನಿ ಮೂಲಕ ರಾಜ್ಯ NPS ನೌಕರ ರಿಗೆ ಪ್ರಮಾಣಿಕವಾಗಿ ಸಂಘಟನೆ ಹೋರಾಟ, ಸರ್ಕಾರ ದ ನಡೆಗಳನ್ನು ತಿಳಿಸಲಾಗಿದೆ.NPS ರದ್ದತಿಗಾಗಿ ಸಮಿತಿ ರಚನೆ(ಆಯೋಗ)ಗೆ ಕರ್ನಾಟಕದಲ್ಲಿ ಯೇ ಮೊದಲಿಗೆ ವಿರೋಧ ವನ್ನು ಶ್ರೀ ಶಾಂತರಾಮ ಹಾಗೂ KSG NPS EA -TV 1 ವಾಹಿನಿಯ ಹಾಗೂ ಪತ್ರಿಕೆ, ಸರ್ಕಾರಕ್ಕೆ ನೇರವಾಗಿ ತಿಳಿಸಲಾಗಿದೆ.
🔷 KSG NPS EA ಯಿಂದ ಆಯೋಗ ರಚನೆಗೆ ಸ್ಪಷ್ಟ ವಿರೋಧ
🔷 ರಕ್ತ ಕೊಟ್ಟೇವು ಪಿಂಚಣಿ ಬಿಡೇವು ಅಭಿಯಾನ ದ ಸಂದರ್ಭದಲ್ಲಿ ಶ್ರೀ ಶಾಂತಾರಾಮ ರವರು ರಾಜ್ಯದ ಎಲ್ಲಾ MLA MLC, MP ಗಳಿಗೆ ರಾಜ್ಯಾಧ್ಯಕ್ಷ ರೇ ಮನವಿ ಪತ್ರ ಬರೆದಿದ್ದಾರೆ.
🔷 ಬೆಂಗಳೂರು ಕಾರ್ಯಕಾರಿ ಸಮಿತಿ ಸಭೆಯಲ್ಲಿ🚶♂🚶♂🚶♂ *ಡಿಸೆಂಬರ್ ತಿಂಗಳಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನ ಚಲೋ ಬೃಹತ್ ಹೋರಾಟಕ್ಕೆ ನಿರ್ಣಯ ಕೈಗೊಳ್ಳಲಾಗಿದೆ*🚶♂🚶♂🚶♂🚶♂
🔷ನಮ್ಮ ಹೋರಾಟ NPS ರದ್ದತಿ🔷
ಮಗದೊಂದು ಬೃಹತ್ ಹೋರಾಟಕ್ಕೆ ಸಿದ್ದರಾಗಿ ಬಂಧುಗಳೇ
👆👆👆All these mass struggle programmes👆👆👆👆
NPS ನೌಕರ ಸ್ನೇಹಿತರೇ ಇದು ಅಂತಿಮ ಹಂತದ ಹೋರಾಟ,ಇದು ಸುಮ್ಮನೆ ಕುಳಿತು ಕೊಳ್ಳುವ ಸಮಯವಲ್ಲ,ಎಲ್ಲರೂ ಭಾಗವಹಿಸಲೇಬೇಕು.NPS ನೌಕರರ ನೋವು, ಹೋರಾಟದ ಕಿಚ್ಚು, ಮಗದೊಮ್ಮೆ ಪ್ರದರ್ಶಿಸುವ ಸಮಯ. ಈಗ ಒಳ್ಳೆಯ ಸಮಯವಿದೆ , ಎಳಿ ಎದ್ದೇಳಿ ನೌಕರರೇ
*ಅಂದು ಕರ್ನಾಟಕದಲ್ಲಿ ಸ್ವಾತಂತ್ರ್ಯಕ್ಕಾಗಿ "ಏಸೂರು ಕೊಟ್ಟರೂ ಈಸೂರು ಬಿಡೇವು"ಹೋರಾಟ.ನಂತರ ಕರ್ನಾಟಕದಲ್ಲಿ ನಿಶ್ಚಿತ ಪಿಂಚಣಿ ಗಾಗಿ "ರಕ್ತ ಕೊಟ್ಟೇವು ಪಿಂಚಣಿ ಬಿಡೇವು" ಎಂಬ ಹೋರಾಟ.ಮುಂದೆ 🔷🔷🔷ಡಿಸೆಂಬರ್ ತಿಂಗಳಲ್ಲಿ ಬೆಳಗಾವಿ ಚಲೋ ಬೃಹತ್ ಹೋರಾಟ*🔷🔷🔷
,
🎤🎤NPS ಹಠಾವೋ ನೌಕರ ಬಚಾವೋ🎤🎤🎤
BASANA GOUDA
STATE MEDIA WING.
KSG NPS EA

Comments
Post a Comment