ಶೇಖರಪ್ಪ ಸರ್ಕಾರಿ ಪ್ರೌಡಶಾಲೆ ಶಿಕ್ಷಕರು ಹಾನಗಲ್ಲ ಕೊನೆಯ ತಿಂಗಳ ಸಂಬಳ 34000 ನಿವೃತ್ತಿ ನಂತರ NPSನಿಂದ ಅವರ ಪಿಂಚಣಿ ಕೇವಲ 850ರಿಂದ1050 ಇನ್ನೂ ಕೈಸೇರದ ಪಿಂಚಣಿ

✊🏻 *ಕ.ರಾ.ಸ.NPS.ನೌಕರರ.ಸಂಘ ®ಬೆಂಗಳೂರು* ✊🏻 ಅತ್ಮೀಯ ನೌಕರ ಬಾಂಧವರೇ ಸೇವೆಯಲ್ಲಿರುವಾಗಲೂ ಹಾಗೂ ಸೇವೆಯ ನಂತರವೂ ಕೂಡ ನೌಕರರ ಬಾಳಿನಲ್ಲಿ ನರಕಯಾತನೆ ನೀಡುವ ಯೋಜನೆ ಅಂದರೆ ಅದು *NPS ಮರಣ ಶಾಸನ*. ಇದರ ಕರಾಳತೆಯನ್ನು ನಾವುಗಳೆಲ್ಲ ಆರಿತುಕೊಂಡು ಇದರ (Never pension scheme) *ಹೆರಮುಡಿ ಕಟ್ಟಲೇಬೇಕೆಂದು ಪಣತೊಟ್ಟು* ಅನೇಕ ಹೋರಾಟಗಳನ್ನು ಮಾಡಿ ಅದರಲ್ಲೂ ದೊಡ್ಡ ಹೋರಾಟಗಳಾದ 👍👍👍👍🙏🙏 *ಫ್ರೀಡಂ ಪಾರ್ಕ್ ಚಲೋ ರಕ್ತ ಕೊಟ್ಟೇವು ಪಿಂಚಣಿ ಬಿಡೆವು* ಅತ್ಯಂತ ಯಶಸ್ವಿಯುತವಾಗಿ ಹೋರಾಡಿ *DCRG ಪಡೆಯುವಲ್ಲಿ ಸಫಲರಾಗಿದ್ದೇವೆ*. *ಸನ್ಮಿತ್ರರೇ* 🙏🙏🙏👏👏 *ಪ್ರಾಣಿಗಳು ತಿಂದ ಆಹಾರ ಕರಗಲು ಮೆಲುಕು ಹಾಕುವಂತೆ ನಮ್ಮ ಹೋರಾಟದ ತೀವ್ರತೆ ಹೆಚ್ಚಾಗಲು NPS ಯೋಜನೆಯಡಿಯಲ್ಲಿ ನಿವೃತ್ತಿಯಾದ ನೌಕರರ ದುಃಸ್ಥಿತಿ ಈ ಯೋಜನೆಯಲ್ಲಿಯೇ ಇದ್ದು ನಿವೃತ್ತಿಯಾದರೆ ನಮಗೆ ಬಂದೊದಗುವ ಸಂಕಷ್ಟಗಳ ಬಗ್ಗೆ ಮನವರಿಕೆ ಮಾಡಿಕೊಳ್ಳುವುದವಶ್ಯಕವಾಗಿದೆ. ( *ಮಾಹಿತಿ ಕೃಪೆ S S ಗೌರಣ್ಣನವರ ಪ್ರಧಾನಕಾರ್ಯದರ್ಶಿಗಳು ಹಾನಗಲ್ಲ*) *ಒಂದು ಜ್ವಲಂತ ಉದಾಹರಣೆ* *ಶ್ರೀ ಶೇಖರಪ್ಪ ಚ ಅದರಗುಂಚಿ* ಸರ್ಕಾರಿ ಪ್ರೌಢಶಾಲೆ ಬೆಳಗಾಲಪೇಟ ತಾ ಹಾನಗಲ್ಲ ಚಿತ್ರಕಲಾ ಶಿಕ್ಷಕರು mo 9845939189 *ಸೇವೆಗೆ ಸೇರಿದ ದಿನಾಂಕ* 08/02 /1996 *ಖಾಯಂ ಆದ ದಿನಾಂಕ* 14 /6/2007 *ನಿವೃತ್ತಿ ದಿನಾಂಕ* 30/05/ 2017 ನಿವೃತ್ತಿ ನಂತರ ಖಾತೆಯಲ್ಲಿದ್ದ ಒಟ್ಟು ಹಣ 640000 ಹಿಂದಿರಿಗಿಸಿದ *ಶೇ 60 ಹಣ 384000* *ಶೇ40 ಹಣ 256000 40%* 👉🏻 ಹಣದಲ್ಲಿ ಪಿಂಚಣಿಗಾಗಿ ಸರ್ಕಾರವನ್ನು ಕೇಳಿದಾಗ 👉🏻ಸರ್ಕಾರವು ನಿಮ್ಮ ಪಿಂಚಣಿಯನ್ನು NSDLನವರು ನಿರ್ಧರಿಸುತ್ತಾರೆ ಎಂದು ಹೇಳುತ್ತದೆ 👉🏻ಬೆಂಗಳೂರಿನ NPS Cell ಗೆ ಸಂಪರ್ಕಿಸಿದಾಗ ಅವರು ಪಿಂಚಣಿಯನ್ನು Mumbai ನಲ್ಲಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು 👉🏻ಮುಂಬೈಗೆ ಸಂಪರ್ಕಿಸಿದಾಗ ಅವರ SBI LIC UTI ಇವುಗಳಲ್ಲಿ ಯಾವುದರ ಅಡಿಯಲ್ಲಿ ನಿಮಗೆ ಪಿಂಚಣಿ ಬೇಕು ಎಂದು ಕೇಳಿದಾಗ 👉🏻ನಮಗೆ SBI LTD ಎಂದು ಹೇಳಿದೆ ಎರಡು ವರ್ಷಗಳ ಕಾಲ ಹತ್ತಾರು ಬಾರಿ ಅಲೆದಾಡಿ ಸ್ವಂತ ಹಣ (10000)ವನ್ನು ಖರ್ಚು ಮಾಡಿಕೊಂಡು ಕೇಳಿದಾಗ 👉🏻ನಿಮಗೆ ಪಿಂಚಣಿ *980* ರಿಂದ *1050* ರೂ ಬರಬಹುದು ಎಂದು ತಿಳಿಸಿದರಂತೆ 👉🏻ಇನ್ನೂ ಪಿಂಚಣಿ ಪ್ರಾರಂಭವಾಗಿಲ್ಲ 👉🏻ಅವರು ಹಾನಗಲ್ಲ ಕಾರ್ಯದರ್ಶಿಗಳೊಂದಿಗೆ ಮಾತನಾಡುತ್ತ *34000* ರೂ ವೇತನ ಪಡೆಯುತ್ತಿದ್ದ ನನಗೆ 👉🏻ಇಂದು *34 ರೂಪಾಯಿ* ಅಂದ್ರ ಬಗ್ಗೇವು ಆಗೇತ್ರಿ ಸರ ಹೆಂಗರ ಮಾಡಿ ಇದು (NPS ) ಹೋಗೋ ವರೆಗೂ ಹೋರಾಡಣ್ರಿ ಜೀವನನ ಸಾಕಾಗೇತ್ರಿ 👉🏻ಒಂದು ಹಾಲಿನ ಬಿಲ್ ಕಟ್ಟಾಕೂ ಕೂಡ ಬೇರೆಯವರನ್ನು ಬೇಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿ 👉🏻 ನಿಮ್ಮ ಜೊತೆಗೆ ಹೋರಾಟಕ್ಕೆ ಎಷ್ಟು ದೂರ ಎಲ್ಲಿಯಾದರೂ ಎಷ್ಟೇ ಖರ್ಚಾದರೂ ಬಂದೇ ಬರುತ್ತೇನೆ ಎಂದು ಹೇಳಿ ತಮ್ಮ ಅಳಲನ್ನು ತೋಡಿಕೊಂಡರು 👉🏻 *ಬಂಧುಗಳೇ* 🙏🙏👏 ಈ ಶಿಕ್ಷಕರಿಗೆ ಬಂದಂತಹ ಪರಿಸ್ಥಿತಿ ನಾವು ಹೋರಾಟ ಮಾಡದೇ ಸುಮ್ಮನೆ ಕುಳಿತರೆ ಖಂಡಿತ ನಮಗೂ ಇದೇ ಪರಿಸ್ಥಿತಿ ಬಂದೇ ಬರುತ್ತದೆ 👉🏻 *ಹಾಗಾಗಿ ಸಹೃದಯರೇ ಇಳಿ ವಯಸ್ಸಿನಲ್ಲಿ ನಮ್ಮ ಹೋರಾಟಕ್ಕೆ ಬಂದೇ ಬರುತ್ತೇನೆಂದು ಅವರು ಹೇಳುವಾಗ* 👉🏻 ಇನ್ನು ಯೌವ್ವನದಲ್ಲಿದ್ದ ನಾವುಗಳು ನಮ್ಮೆಲ್ಲಾ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಕಾರ್ಯದೊತ್ತಡಗಳನ್ನು ಮೀರಿ 👉🏻 ಮುಂಬರುವ *ಡಿಸೆಂಬರ್ 10* ರ ನಿರ್ಣಾಯಕ ಹೋರಾಟ ಮಾನ್ಯ ಮುಖ್ಯಮಂತ್ರಿಗಳೇ ಕೊಟ್ಟ ಮಾತು ಉಳಿಸಿ *OPS ಗಾಗಿ* ಸಕ್ರೀಯವಾಗಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಿ 👍👍 *ನಿಶ್ಚಿತ ಪಿಂಚಣಿಯನ್ನು ಪಡೆದೇ ತೀರೋಣ* *ಡಿಸೆಂಬರ್ ಹತ್ತು ಎದ್ದು ಬನ್ನಿ ಆವತ್ತು* 🙏🙏 🙏🏻🙏🏻🙏🏻🙏🏻🙏🙏 *ಶ್ರೀ ಕರಿಬಸಪ್ಪ ದೊಡ್ಡಜ್ಜರ* *ಪ್ರಧಾನಕಾರ್ಯದರ್ಶಿ* ಕ.ರಾ.ಸ.NPS.ನೌಕರರ.ಸಂಘ ತಾಲ್ಲೂಕ್ ಘಟಕ ಕಂಪ್ಲಿ

Comments