*ಚಿಕ್ಕಮಗಳೂರಿನಲ್ಲಿ ನಿವೃತ್ತ ಶಿಕ್ಷಕರೊಬ್ಬರಿದ್ದಾರೆ. 1997ರಿಂದ ಕೆಲಸ ಮಾಡುತ್ತಿದ್ದರು, 2012ರಲ್ಲಿ ಅವರ ಉದ್ಯೋಗ ಕಾಯಂ ಆಯಿತು. 2017ರಲ್ಲಿ ಅವರು ನಿವೃತ್ತರಾದಾಗ ₹ 32 ಸಾವಿರ ವೇತನ ಪಡೆಯುತ್ತಿದ್ದರು. ನಿವೃತ್ತಿ ವೇತನ ಪದ್ಧತಿಯಲ್ಲಿರುತ್ತಿದ್ದರೆ ಅವರಿಗೆ ₹ 16 ಸಾವಿರ ಪಿಂಚಣಿ ಬರುತ್ತಿತ್ತು. ಆದರೆ ಅವರು ಎನ್‌ಪಿಎಸ್ ನೌಕರರಾಗಿದ್ದರು. ಈಗ ನಿವೃತ್ತಿ ಸೌಲಭ್ಯವಾಗಿ ₹ 665 ಪಡೆಯುತ್ತಿದ್ದಾರೆ!*
✊🏻 *ಕ.ರಾ.ಸ.NPS.ನೌಕರರ.ಸಂಘ ®ಬೆಂಗಳೂರು* ✊🏻 ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ವ್ಯವಸ್ಥೆಯಲ್ಲಿ *ಸಮಾನ ಕೆಲಸಕ್ಕೆ ಸಮಾನ ವೇತನ* ಎಂಬ ಸಾಂವಿಧಾನಿಕ ತಾತ್ವಿಕತೆಯೇ ನಾಶವಾಗುತ್ತದೆ *ಎನ್‌ಪಿಎಸ್ ರದ್ದತಿಯ ಔಚಿತ್ಯ* *ಚಿಕ್ಕಮಗಳೂರಿನಲ್ಲಿ ನಿವೃತ್ತ ಶಿಕ್ಷಕರೊಬ್ಬರಿದ್ದಾರೆ. 1997ರಿಂದ ಕೆಲಸ ಮಾಡುತ್ತಿದ್ದರು, 2012ರಲ್ಲಿ ಅವರ ಉದ್ಯೋಗ ಕಾಯಂ ಆಯಿತು. 2017ರಲ್ಲಿ ಅವರು ನಿವೃತ್ತರಾದಾಗ ₹ 32 ಸಾವಿರ ವೇತನ ಪಡೆಯುತ್ತಿದ್ದರು. ನಿವೃತ್ತಿ ವೇತನ ಪದ್ಧತಿಯಲ್ಲಿರುತ್ತಿದ್ದರೆ ಅವರಿಗೆ ₹ 16 ಸಾವಿರ ಪಿಂಚಣಿ ಬರುತ್ತಿತ್ತು. ಆದರೆ ಅವರು ಎನ್‌ಪಿಎಸ್ ನೌಕರರಾಗಿದ್ದರು. ಈಗ ನಿವೃತ್ತಿ ಸೌಲಭ್ಯವಾಗಿ ₹ 665 ಪಡೆಯುತ್ತಿದ್ದಾರೆ!* ಎನ್‌ಪಿಎಸ್ ಪದ್ಧತಿಯಲ್ಲಿ ನಿವೃತ್ತಿಯಾದ ನಂತರ ನೌಕರನಿಗೂ ಸರ್ಕಾರಕ್ಕೂ ಯಾವ ಸಂಬಂಧವೂ ಇಲ್ಲ. ನಿವೃತ್ತಿ ನಂತರ ಎನ್‌ಎಸ್‌ಡಿಎಲ್ ಎಂಬ ಕಂಪನಿಗೂ ನೌಕರನಿಗೂ ಸಂಬಂಧ. ನೌಕರನೂ ಸರ್ಕಾರವೂ ನೌಕರನ ಹೆಸರಿನಲ್ಲಿ ಹೂಡಿಕೆ ಮಾಡಿದ ಹಣದಲ್ಲಿ ಎನ್‌ಎಸ್‌ಡಿಎಲ್, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಬಂದ ಹಣದಲ್ಲಿ ಶೇ 60ರಷ್ಟನ್ನು ನಿವೃತ್ತಿಯ ವೇಳೆ ನೌಕರನಿಗೆ ಕೊಡುತ್ತದೆ. ಉಳಿದ ಶೇ 40ರಷ್ಟು ಮೊತ್ತದ ಆಧಾರದಲ್ಲಿ ತಿಂಗಳ ನಿವೃತ್ತಿ ಸೌಲಭ್ಯ ಸಿಗುತ್ತದೆ. ಅದು ಒಮ್ಮೆ ನಿಗದಿ ಮಾಡಲ್ಪಟ್ಟರೆ ಶಾಶ್ವತವಾಗಿ ಅಷ್ಟೇ ಇರುತ್ತದೆ. ಹಳೆಯ ನಿವೃತ್ತಿ ವೇತನ ಪದ್ಧತಿಯಲ್ಲಾದರೆ ಜೀವನಾವಶ್ಯಕ ವೆಚ್ಚ ಏರಿದಂತೆ ನೌಕರರ ವ...