🏌️ 🏌️🏌️🏌️🏌️🏌️🏌️ *ರಾಷ್ಟ್ರೀಯ ಕ್ರೀಡಾ ದಿನ* ಮೇಜರ್ ಧ್ಯಾನ್ ಚಂದ್ ರ ಜನ್ಮದಿನವಾದ ಆಗಸ್ಟ್ 29 ನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಧ್ಯಾನ್ ಚಂದ್ ಅಪ್ಪಟ ದೇಶಭಕ್ತ, ಅಪ್ರತಿಮ ಹಾಕಿ ಆಟಗಾರ, ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆಯೇ ಭಾರತಕ್ಕೆ ಒಲಿಂಪಿಕ್ ನಲ್ಲಿ ಮೂರು ಬಾರಿ ಅಂದರೆ ಹ್ಯಾಟ್ರೀಕ್ ಗೋಲ್ಡ್ ಮೆಡಲ್ ಗಳನ್ನು ತಂದು ಕೊಟ್ಟ ತಾಯಿ ಭಾರತಿಯ ಹೆಮ್ಮೆಯ ಪುತ್ರ . ಧ್ಯಾನ್ ಚಂದ್ ರು 1905 ಆಗಸ್ಟ್ 29 ರಂದು ಉತ್ತರ ಪ್ರದೇಶದ ಪ್ರಯಾಗದಲ್ಲಿ ಜನಿಸುತ್ತಾರೆ. ಇವರ ತಂದೆ ಸೋಮೇಶ್ವರ ದತ್ತ ರವರು ಭಾರತೀಯ ಸೈನ್ಯದಲ್ಲಿ ಹವಾಲ್ದಾರರು ಆಗಿದ್ದರಿಂದ ಪದೇ ಪದೇ ಬೇರೆಬೇರೆ ಕಡೆ ವರ್ಗಾವಣೆ ಆಗುತ್ತಿತ್ತು. ಆದ್ದರಿಂದ ಮಕ್ಕಳನ್ನು ಹೆಚ್ಚಾಗಿ ಓದಿಸಲಾಗಲಿಲ್ಲ. ಧ್ಯಾನ್ ಚಂದ್ ರು ಕೇವಲ ಮಾಧ್ಯಮಿಕ. ಶಿಕ್ಷಣವನ್ನು ಮಾತ್ರ ಪಡೆಯುತ್ತಾರೆ. ಕೊನೆಗೆ ಉತ್ತರಪ್ರದೇಶದ ಝಾನ್ಸಿಯಲ್ಲಿ ನೆಲಸುತ್ತಾರೆ. ಕ್ರೀಡೆಗಳಲ್ಲಿ ಅತಿ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಧ್ಯಾನ್ ಚಂದ್ ರು ಕುಸ್ತಿಯಲ್ಲಿ ಯಾವಾಗಲೂ ಮಗ್ನರಾಗಿರುತ್ತಿದ್ದರು. ಆದರೆ ಅವರನ್ನು ಒಬ್ಬ ಕ್ರೀಡಾಪಟು ಅಂತ ಮಾಡಿದ್ದು ನಮ್ಮ ರಾಷ್ಟ್ರೀಯ ಕ್ರೀಡೆ " ಹಾಕಿ". ಉತ್ತರಪ್ರದೇಶದ ಝಾನ್ಸಿಯಲ್ಲಿ ಹೆಚ್ಚಾಗಿ ಹಾಕಿ ಕ್ಲಬ್ ಗಳು ಇದ್ದುದ್ದರಿಂದ ಯಾವಾಗಲೂ ಹಾಕಿ ಪಂದ್ಯಾಟಗಳನ್ನು ನೋಡಿ-ನೋಡಿ ಹಾಕಿಯ ಬಗ್ಗ...